ಭಾಲ್ಕಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಗನ್ನಾಥ ಕಮಲಾಪುರೆ ಮತ್ತು ಬಾಬು ಮಡಕಿ ಸಂಪದಾನೆಯ ಗುರುಬಸವ ಸಾಮೂಹಿಕ ಪ್ರಾರ್ಥನೆ ಕೃತಿಯನ್ನು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಬಿಡುಗಡೆಗೊಳಿಸಿದರು. ಪ್ರೊ.ಜಾಧವ್ ಕಲಬುರಗಿ, ಕಾಶೀನಾಥ ಚಿದ್ರೆ, ಬಸವರಾಜ, ಅನಿಲಕುಮಾರ, ಶರಣಮ್ಮ, ಶ್ರುತಿ, ರತ್ನಶ್ರೀ, ಶಿವಲಿಂಗ, ಮಲ್ಲಿಕಾರ್ಜುನ ಇತರರಿದ್ದರು. 
ಜಿಲ್ಲೆ

ಮನಸ್ಸಿನ ಪ್ರಬುದ್ಧತೆಗೆ ಪ್ರಾರ್ಥನೆ ಪೂರಕ

ರಾಜು ಯಮಕನಮರಡಿ

ಭಾಲ್ಕಿ: ಮನುಷ್ಯನ ಮನಸ್ಸಿನ ಪ್ರಬುದ್ಧತೆಗೆ ಪ್ರಾರ್ಥನೆ ಪೂರಕವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಜಗನ್ನಾಥ ಕಮಲಾಪುರೆ ಮತ್ತು ಬಾಬು ಮಡಕಿ ಸಂಪದಾನೆಯ ಗುರುಬಸವ ಸಾಮೂಹಿಕ ಪ್ರಾರ್ಥನೆ ಕೃತಿ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರತಿದಿನ ಪ್ರಾರ್ಥನೆ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಶಾಂತಿ, ನೆಮ್ಮದಿ ದೊರಕುತ್ತದೆ. ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ದಿನನಿತ್ಯ ಪ್ರಾರ್ಥನೆ ಮಾಡುತ್ತಿದ್ದರು. ಶರಣರು, ಸಂತರು, ಮಹಾತ್ಮರು ಪ್ರಾರ್ಥನೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದರು. ಆ ಪ್ರಾರ್ಥನೆಯ ಮೂಲಕ ತಮ್ಮ ಮನಃಶಾಂತವಾಗಿಟ್ಟುಕೊಳ್ಳುತ್ತಿದ್ದರು. ಎಲ್ಲರೂ ನಿತ್ಯದ ಬದುಕಿನಲ್ಲಿ ಪ್ರಾರ್ಥನೆಗೆ ಒಂದಿಷ್ಟು ಸಮಯ ಮೀಸಲಿಡಬೇಕು ಎಂದು ಹೇಳಿದರು.

ಹಿರೇಮಠ ಸಂಸ್ಥಾನ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಪ್ರೊ.ಜಾಧವ್ ಕಲಬುರಗಿ ಕೃತಿ ಬಿಡುಗಡೆ ಮಾಡಿದರು. ಪ್ರಮುಖರಾದ ಕಾಶೀನಾಥ ಚಿದ್ರೆ, ಬಸವರಾಜ, ಅನಿಲಕುಮಾರ, ಶರಣಮ್ಮ, ಶ್ರುತಿ, ರತ್ನಶ್ರೀ, ಶಿವಲಿಂಗ, ಮಲ್ಲಿಕಾರ್ಜುನ ಇತರರಿದ್ದರು.