ಜಿಲ್ಲೆ

ವಿಷ್ಣುವಿನ ಆರಾಧನೆಯ ಸಾಧನ ಮಂಡಲ : ವಿದ್ಯಾಪ್ರಸನ್ನತೀರ್ಥ ಶ್ರೀ ಆಶೀರ್ವಚನ

ಸೌಮ್ಯ ಆರ್

ಸುಬ್ರಹ್ಮಣ್ಯ: ವಿಷ್ಣುವಿನ ಆರಾಧನೆಗೆ ದೊಡ್ಡ ಸಾಧನ ಎಂದರೆ ಮಂಡಲ. ಪಂಚಭೂತ ಪದಾರ್ಥಗಳ ಪ್ರತಿನಿಧಿಯಾಗಿ ಪಂಚವರ್ಣಗಳನ್ನು ಬಳಸಿ ಮಂಡಲ ರಚಿಸಬೇಕು. ಚಕ್ರಾಬ್ಜ ಮಂಡಲದಲ್ಲಿ ಹೇಗೆ ಆರಾಧನೆ ವಾಡಬೇಕೆಂಬುದನ್ನು ವಿವರಿಸುವ ನಮ್ಮ ಶಿಷ್ಯ ವಿದ್ವಾಂಸ ಕೃಷ್ಣಪ್ರಸಾದ ನೂರಿತ್ತಾಯ ರಚಿಸಿದ ಸುಂದರ ಕೃತಿ ಚಕ್ರಾಬ್ಜಮಂಡಲ ಆರಾಧನಾ ವಿಧಿ ನಮಗೆ ತುಂಬ ಸಂತಸ ನೀಡಿದೆ. ಈ ಕೃತಿಯಿಂದ ಆರಾಧನಾ ವಿಧಿಯ ಬಗ್ಗೆ ತಿಳಿಯುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ವಿದ್ವಾಂಸ ಕಷ್ಣ ಪ್ರಸಾದ್ ನೂರಿತ್ತಾಯ ರಚಿಸಿದ ಚೊಚ್ಚಲ ಕೃತಿ ‘ಚಕ್ರಾಬ್ಜಮಂಡಲ ಆರಾಧನ ವಿಧಿ’ಯನ್ನು ಸುಬ್ರಹ್ಮಣ್ಯ ಮಠದಲ್ಲಿ ಗುರುವಾರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್ ರಾಮಕುಂಜ, ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅರ್ಚಕರಾದ ರಾಮಕೃಷ್ಣ ನೂರಿತ್ತಾಯ, ರಮೇಶ ನೂರಿತ್ತಾಯ, ವಿದ್ವಾಂಸ ಕೆ.ಕೃಷ್ಣಪ್ರಸಾದ ನೂರಿತ್ತಾಯ, ಸಹಸಂಪಾದಕ ಸೂರ್ಯಪ್ರಕಾಶ ಉಡುಪ, ಈರಕಿಮಠದ ನರಹರಿ ಉಪಾಧ್ಯಾಯ, ಪ್ರಮುಖರಾದ ಶಿವಪ್ರಸಾದ್ ಇಜ್ಜಾವು, ಸುದರ್ಶನ ಕೆದಿಲಾಯ ನಾರಂಪಾಡಿ, ಸಂಧ್ಯಾ, ಸುನೀತಾ, ಸುಕೃತ್ ಕೆದಿಲಾಯ, ಸುಮೀಕ್ಷಾ ಉಪಸ್ಥಿತರಿದ್ದರು.

ಮಹಾವಿಷ್ಣುವಿನ ಆರಾಧನೆ ಸರ್ವಾಭೀಷ್ಠಪ್ರದವಾದುದು. ಎಲ್ಲ ದೇವತೆಗಳ ಆರಾಧನೆ ಅಂತರ್ಗತನಾದ ಭಗವಂತನಿಗೆ ಅರ್ಪಿತ. ಪಂಚಭೂತ ಪದಾರ್ಥಗಳ ಮಧ್ಯೆ ವಾಸಿಸುವ ನಾವು ಭಗವಂತನನ್ನು ಪ್ರತೀಕದಲ್ಲಿ ಉಪಾಸನೆ ವಾಡಬೇಕು. ಗಾಳಿ, ಆಕಾಶಗಳು ದೃಷ್ಟಿ ಗೋಚರವಲ್ಲ. ಆದ್ದರಿಂದ ಮಣ್ಣು, ನೀರು, ಬೆಂಕಿಗಳ ಪ್ರತೀಕದಲ್ಲಿ ದೇವರ ಉಪಾಸನೆ ವಾಡುತ್ತೇವೆ. ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠ.