ಜಿಲ್ಲೆ

ರೇಖಾರಾಣಿಗೆ ಶಿಕ್ಷಕರತ್ನ ಪ್ರಶಸ್ತಿ ಪ್ರದಾನ

ಎನ್.ವೆಂಕಟೇಶ್

ಶಿಡ್ಲಟ್ಟ: ತಾಲೂಕಿನ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಎನ್​.ರೇಖಾ ರಾಣಿಗೆ ರಾಯಚೂರು ಕಲಾಸಂಕುಲ ಸಂಸ್ಥೆಯು ರಾಜ್ಯಮಟ್ಟದ ಶಿಕ್ಷಕರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.ಇತ್ತೀಚೆಗೆ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಖಾ ರಾಣಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಾಷ್ಟ್ರಮಟ್ಟದಲ್ಲಿ ಸರ್ಕಾರಿ ನೌಕರರ ಜಾನಪದ ನೃತ್ಯದಲ್ಲಿ ಪ್ರತಿನಿಧಿಸಿದ್ದ ಶಿಕ್ಷಕಿ ಎನ್​.ಶೈಲಜಾ, ರಾಷ್ಟ್ರ ಪ್ರಶಸ್ತಿ ಪುರಸತ ನಿವೃತ್ತ ಶಿಕ್ಷಕ ನಂದೀಶ್​ ಅವರನ್ನು ಸನ್ಮಾನಿಸಲಾಯಿತು. ರಾಯಚೂರಿನ ಕಲಾ ಸಂಕುಲ ಸಂಸ್ಥೆಯ ಅಧ್ಯೆ ರೇಖಾ ಬಡಿಗೇರ್​, ಮಾರುತಿ ಬಡಿಗೇರ್​, ಜಿ.ಎನ್​.ನೇತ್ರಾವತಿ, ಪದ್ಮಜಾ ಇದ್ದರು.