ಜಿಲ್ಲೆ

ಸೇವಾದಳ ಕಾರ್ಯ ಚಟುವಟಿಕೆಗಳು ಕ್ರಿಯಾಶೀಲವಾಗಲಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಎಲ್ಲ ಶಿಕ್ಷಕರು ಮಕ್ಕಳಲ್ಲಿ ದೇಶಭಕ್ತಿ, ಶಿಸ್ತು, ಸೇವಾ ಮನೋಭಾವ ಗುಣಗಳನ್ನು ಬೆಳೆಸಬೇಕು. ಸೇವಾದಳ ಕಾರ್ಯ ಚಟುವಟಿಕೆಗಳನ್ನು ಎಲ್ಲ ಶಾಲೆಗಳಲ್ಲಿ ಕ್ರಿಯಾಶೀಲವಾಗಿ ನಡೆಸಬೇಕು ಎಂದು ಅಪರ ಆಯುಕ್ತರ ಕಾರ್ಯಾಲಯದ ಉಪ ನಿರ್ದೇಶಕ ಗಿರಿಶ ಪದಕಿ ಹೇಳಿದರು.

ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕು ಸಮಿತಿಯಿಂದ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕ- ಶಿಕ್ಷಕಿಯರ ಪುನಃಶ್ಚೇತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸೇವಾದಳ ತಾಲೂಕು ಅಧ್ಯಕ್ಷ ಮಂಜುನಾಥ ತಿರ್ಲಾಪುರ ಮಾತನಾಡಿ, ಸೇವಾದಳ ಕಾರ್ಯ ಚಟುವಟಿಕೆಗಳು ನಿಂತ ನೀರಾಗದೆ ಹರಿಯುವ ನೀರಾಗಬೇಕು. ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇಶಭಕ್ತಿ ಬೆಳೆಸುವಂಥ ಕಾರ್ಯಕ್ರಮಗಳಿಗೆ ಸಹಕರಿಸಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಶಂಕರ ಗಂಗಣ್ಣವರ ಪ್ರಸಕ್ತ ವರ್ಷದ ಕಾರ್ಯಕ್ರಮಗಳ ರೂಪುರೇಷೆ ವಿವರಿಸಿದರು.

ಕ್ಷೇತ್ರ ಸಮನ್ವಯ ಅಽಕಾರಿ ಕುಮಾರ ಕೆ.ಎಫ್., ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಈಶ್ವರ ಆಯಟ್ಟಿ, ಪದಾಧಿಕಾರಿಗಳಾದ ಪ್ರಕಾಶ ಗೋಣಿ, ಮಂಜುಳಾ ಹಾರಿಕೊಪ್ಪ, ಸುರೇಶ ಕಾಟ್ಕರ, ಬಸಪ್ಪ ನವಲಗುಂದ, ಇತರರಿದ್ದರು. ಉಮಾ ತಡಕೋಡ ಸ್ವಾಗತಿಸಿದರು. ಸತೀಶ ವಗ್ಗನವರ ವಂದಿಸಿದರು.