ಜಿಲ್ಲೆ

ಬೆಳೆ ವಿಮೆಗೆ 43 ಸಾವಿರ ರೈತರ ನೋಂದಣಿ

ಸಾಧನೆ ಶೇ.19 ಮಾತ್ರ - ಹಲವು ಕಾರಣಗಳಿಂದ ಸೌಲಭ್ಯ ಪಡೆಯಲು ಒಲವು ತೋರದ ರೈತರು

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಜಿಲ್ಲೆಯಲ್ಲಿ 43,841 ರೈತರು ಮಾತ್ರ ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಪ್ರಾಕೃತಿಕ ವಿಕೋಪ ಕಾರಣಗಳಿಂದ ಬೆಳೆ ನಾಶದಿಂದ ಉಂಟಾದ ನಷ್ಟಕ್ಕೆ ಪರಿಹಾರ ಒದಗಿಸುವ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ (ಪಿಎಂಎ್ಬಿವೈ) ಯಡಿ 42,469 ರೈತರು ಮತ್ತು ಹವಾಮಾನ ಆಧಾರಿತ ವಿಮೆ (ಡಬ್ಲುೃಬಿಸಿಐಎಸ್) ಯೋಜನೆಯಡಿ 1,372 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 1,72,439 ಅತಿಸಣ್ಣ ರೈತರು, 40,512 ಸಣ್ಣ ರೈತರು, ಇತರ 15,207 ರೈತರು ಸೇರಿ ಒಟ್ಟು 2,28,158 ರೈತರಿದ್ದು, ವಿಮೆ ನೋಂದಣಿಯಲ್ಲಿ ಶೇ.19 ಸಾಧನೆಯಾಗಿದೆ.

ಬೆಳೆ ವಿಮೆ ಪರಿಹಾರ
ಮಳೆಯ ಅಭಾವ, ಅಂತರ್ಜಲಮಟ್ಟ ಕುಸಿತ, ಕೊಳವೆಬಾವಿ ವೈಲ್ಯ ಸೇರಿ ವಿವಿಧ ಸಮಸ್ಯೆ ಹೊಂದಿರುವ ಜಿಲ್ಲೆ ಆಗಾಗ ಬರಕ್ಕೆ ತುತ್ತಾಗುತ್ತಿದೆ. ಕಳೆದ ಒಂದೂವರೆ ದಶಕದಲ್ಲಿ ಅನಾವೃಷ್ಟಿಗೆ ನಲುಗಿ ಕೋಟ್ಯಂತರ ರೂ. ನಷ್ಟ ಕಂಡಿದೆ. ಅಪಾರ ಪ್ರಮಾಣದ ಬೆಳೆ ನಾಶದಿಂದ ರೈತರು ಆರ್ಥಿಕವಾಗಿ ನಷ್ಟಕ್ಕೊಳಗಾಗಿದ್ದಾರೆ. ಕಳೆದ ವರ್ಷ 737 ಮಿಮೀ ವಾರ್ಷಿಕ ವಾಡಿಕೆ ಮಳೆಗೆ ಬದಲಾಗಿ 586.1 ಮಿಮೀ (ಶೇ.-18ರಷ್ಟು ಕೊರತೆ) ಸುರಿದಿದ್ದು ಬರೋಬ್ಬರಿ 75,208 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು. ಸರ್ಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂಬುದಾಗಿ ೋಷಿಸಿತ್ತು. ಹಾಗೆಯೇ 10 ಹಂತಗಳಲ್ಲಿ 97,278 ರೈತರಿಗೆ 55 ಕೋಟಿ ರೂ. ಬರ ಪರಿಹಾರವನ್ನೂ ಪಾವತಿಸಲಾಯಿತು. ಬೆಳೆ ವಿಮೆ ಯೋಜನೆಯಡಿ 2022-23ನೇ ಸಾಲಿನಲ್ಲಿ 39837 ರೈತರಿಗೆ 13.53 ಕೋಟಿ ರೂ, 2023-24ನೇ ಸಾಲಿನಲ್ಲಿ 40,944 ರೈತರಿಗೆ 43.57 ಕೋಟಿ ರೂ. ಪರಿಹಾರ ನೀಡಲಾಗಿದೆ.


ನೋಂದಣಿಗೆ ತೋರುವ ಕಾಳಜಿ ವಿತರಣೆಗಿಲ್ಲ
ಬೆಳೆ ವಿಮೆಗೆ ಹೆಸರು ನೋಂದಣಿಗೆ ತೋರುವ ಕಾಳಜಿ ಪರಿಹಾರ ವಿತರಣೆಯಲ್ಲಿ ಕಂಡುಬರುವುದಿಲ್ಲ. ಅವೈಜ್ಞಾನಿಕ ನೀತಿಗಳನ್ನು ಅನುಸರಿಸುವುದೇ ಹೆಚ್ಚು. ಒಂದೆಡೆ ಬರದ ವಾತಾವರಣವಿದ್ದರೂ, ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿರುವುದರ ವಾಸ್ತವ ಚಿತ್ರಣವಿದ್ದರೂ ಮಳೆಯ ಪ್ರಮಾಣದ ಅಂಕಿ-ಅಂಶಗಳನ್ನು ಆಧರಿಸಿ ಕಡಿಮೆ ಪರಿಹಾರ ನೀಡುವ ಕೆಲಸವಾಗುತ್ತಿದೆ. ಕೆಲವೆಡೆ ನೆರವು ಸಿಗುವುದೇ ಇಲ್ಲ. ಕಳೆದ ವರ್ಷ ಬಾಗೇಪಲ್ಲಿ ತಾಲೂಕಿನ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೋಂದಾಯಿತ ರೈತರಿಗೆ ವಿಮೆ ಸೌಲಭ್ಯ ತಿರಸ್ಕರಿಸಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧ್ಯಯನ ಸಮಿತಿ ರಚಿಸಿದ್ದು ವಿಮಾ ಕಂಪನಿ ಸಿಬ್ಬಂದಿ ಅವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಿ ವರದಿ ತಯಾರಿಸಿರುವುದು ತಿಳಿದು ಬಂದಿದೆ.


ಗೊಂದಲ ನಿವಾರಣೆ ಅಗತ್ಯ
ಕೃಷಿ, ತೋಟಗಾರಿಕಾ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ವಿಮಾ ಕಂಪನಿಗಳೊಂದಿಗೆ ನೋಂದಣಿಗೆ ಹೆಚ್ಚಿಗೆ ಜಾಗೃತಿ ಮೂಡಿಸಲಾಗುತ್ತದೆ. ಉತ್ತಮ ರೀತಿಯಲ್ಲಿ ಸ್ಪಂದಿಸಲಾಗುತ್ತಿದೆ. ಆದರೆ, ಬೆಳೆ ನಷ್ಟ ಪರಿಹಾರ ಸಂದರ್ಭದಲ್ಲಿ ರೈತನ ಗೋಳು ಕೇಳುವುದೇ ಇಲ್ಲ. ಬ್ಯಾಂಕಿಗೆ ಜಮಾ ಮಾಡಿದಷ್ಟು ಹಣವನ್ನು ಪಡೆದುಕೊಳ್ಳಬೇಕು. ತಾಂತ್ರಿಕ ಸಮಸ್ಯೆಗಳಿಂದ ತಡೆಹಿಡಿದಾಗ ನೋಂದಾಯಿತರು ದಾಖಲೆಗಳನ್ನು ಸಲ್ಲಿಸಿ, ಸರಿಪಡಿಸಿಕೊಳ್ಳಲು ತಿಂಗಳಾನುಗಟ್ಟಲೇ ಕಾಯಬೇಕಾಗುತ್ತದೆ. ಕಚೇರಿಗೆ ಹಲವು ಬಾರಿ ಅಲೆಯಬೇಕು. ಇದರ ಬೇಸರದಲ್ಲಿ ಮುಂಬರುವ ಸಾಲಿನಲ್ಲಿ ವಿಮೆ ಕಂತು ಪಾವತಿಸಿ, ಅರ್ಜಿ ಸಲ್ಲಿಸಲು ಬಹಳಷ್ಟು ರೈತರು ಮುಂದಾಗುವುದಿಲ್ಲ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ನೋಂದಣಿ ಮಾಡಿಸಲು ಒಲವು ವ್ಯಕ್ತವಾಗುತ್ತಿಲ್ಲ. ಜತೆಗೆ ಬೆಳೆ ವಿಮೆ ಮಾಡಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಪಡೆದವರಿಗೆ ಕಡ್ಡಾಯವಾಗಿ ವಿಮೆ ಹೊಂದಲು ಒತ್ತಡ ಹೇರಲಾಗುತ್ತದೆ.

ಸಾಧನೆ ಶೇ.19 ಮಾತ್ರ - ಹಲವು ಕಾರಣಗಳಿಂದ ಸೌಲಭ್ಯ ಪಡೆಯಲು ಒಲವು ತೋರದ ರೈತರು
ವರ್ಷ ನೋಂದಾಯಿತರು ವಿಮೆ ಹಣ
2020-2021 27090 1.78 ಕೋಟಿ
2021-2022 13243 7.73 ಕೋಟಿ
2022-2023 39837 13.53 ಕೋಟಿ
2023-2024 40944 43.57 ಕೋಟಿ

ವಿವಿಧ ವಿಮಾ ಯೋಜನೆಯಡಿ ನೋಂದಾಯಿತರ ವಿವರ
ತಾಲೂಕು ಪಿಎಂಎ್ಬಿವೈ ಡಬ್ಲುೃಬಿಸಿಐಎಸ್ ಒಟ್ಟು
ಬಾಗೇಪಲ್ಲಿ 9862 8 9870
ಚಿಕ್ಕಬಳ್ಳಾಪುರ 751 1023 1774
ಚಿಂತಾಮಣಿ 2187 59 2246
ಗೌರಿಬಿದನೂರು 19939 28 19967
ಗುಡಿಬಂಡೆ 3328 28 3356
ಮಂಚೇನಹಳ್ಳಿ 4310 - 4310
ಶಿಡ್ಲಘಟ್ಟ 2092 226 2318
ಒಟ್ಟು 42469 1372 43841