ಜಿಲ್ಲೆ

ನಾರಿಯರ ಜೀವನಕ್ಕೆ ಗೃಹಲಕ್ಷ್ಮೀ ದೊಡ್ಡ ಶಕ್ತಿ

ಧನಂಜಯ ಎಸ್.ಹಕಾರಿ.

ಹಿರಿಯೂರು: ಮಹಿಳೆಯರ ಆರ್ಥಿಕ ಸದೃಢತೆ-ಕುಟುಂಬ ನಿರ್ವಹಣೆಗೆ ಗೃಹಲಕ್ಷ್ಮೀ ಯೋಜನೆ ಬಹುದೊಡ್ಡ ಶಕ್ತಿ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರ ವ್ಯಾಪ್ತಿಯ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಭಾನುವಾರ ಭೇಟಿ ನೀಡಿ ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಕಾರ್ಯ ಪರಿಶೀಲಿಸಿ ಮಾತನಾಡಿದರು.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಅನನ್ಯ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮಹಿಳೆಯ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದು. ಪಂಚ ಗ್ಯಾರಂಟಿ ಯೋಜನೆಗೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ಗೃಹಲಕ್ಷ್ಮೀ ಅರ್ಜಿ ನೋಂದಣಿ ಪ್ರಕ್ರಿಯೆ ಪರಿಶೀಲಿಸಿದ ಸಚಿವರು, ಕಾಂಗ್ರೆಸ್ ಚುನಾವಣೆ ವೇಳೆ ಘೋಷಿಸಿದಂತೆ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ ತಿಂಗಳಲ್ಲಿ ಚಾಲನೆ ನೀಡಲಿದೆ.

ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಮಾಸಿಕ ಎರಡು ಸಾವಿರ ರೂ. ಜಮಾ ಆಗಲಿದೆ. ಜಿಲ್ಲೆಯಲ್ಲಿ ಶೇ.100ರಷ್ಟು ನೋಂದಣಿ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಮಹಂತೇಶ್, ಸದಸ್ಯ ವಿಠ್ಠಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ.ರಮೇಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ

ಪಿ.ಎಸ್.ಸಾದತ್ ವುಲ್ಲಾ, ಜಿ.ದಾದಾಪೀರ್, ಕಲ್ಲಹಟ್ಟಿ ಹರೀಶ್, ಆರ್.ನಾಗೇಂದ್ರನಾಯ್ಕ, ಸುರೇಶ್ ಬಾಬು, ಗೌರೀಶ್, ಜ್ಞಾನೇಶ್, ಡಾ. ಜೆ.ಆರ್.ಸುಜಾತಾ, ಜಿ.ಎಲ್.ಮೂರ್ತಿ ಇತರರಿದ್ದರು.