ramanna 
ಜಿಲ್ಲೆ

ಜಾತಿ ಕಾಲಂನಲ್ಲಿ ಮಾದಿಗವೆಂದು ನೋಂದಣಿ ಮಾಡಿಸಿ

ರಾಯಚೂರು ಜಿಲ್ಲೆಯಲ್ಲಿ ಸೆ.22 ರಿಂದ ಪ್ರಾರಂಭವಾಗಿರುವ ಹಿಂದುಳಿದ ವರ್ಗಗಳ ಗಣತಿಯಲ್ಲಿ ಮಾದಿಗ ಸಮುದಾಯದ ಜನರು ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಯಿಸಬೇಕೆಂದು ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ಅಧ್ಯಕ್ಷ ರಾಮಣ್ಣ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾ. ನಾಗಮೋಹನ ದಾಸ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಸಮೀಕ್ಷೆ ಬರುವ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಬೇಕೆಂದರು ಮನವಿ ಮಾಡಿದರು.

ಮತಾಂತರವಾಗದೇ ಕ್ರಿಶ್ಚಿಯನ್ ಆಚರಣೆ ಮಾಡುವವರು ಮಾದಿಗ ಎಂದು ಬರೆಯಿಸಬೇಕು. ದಾಖಲೆಗಳಲ್ಲಿ ಮಾದಿಗ ಎಂದು ಇದೆ. ಅದರಿಂದ ಮಾದಿಗ ಸಮುದಾಯದವರು ಜಾತಿ ಹಾಗೂ ಉಪ ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು ಎಂದರು.

ಈ ಸಂದರ್ಭದಲ್ಲಿ ಸದಸ್ಯರಾದ ಬಾಬು ಕಮಲಪುರ,ಬಸವರಾಜ,ರಾಮಚಂದ್ರಪ್ಪ, ಎಚ್.ಸಿ.ನರಸಿಂಗಪ್ಪ, ರಾಮುಲು ಇದ್ದರು.