ಜಿಲ್ಲೆ

ಕಿಮ್ಸ್​ಗೆ ಪ್ರಾದೇಶಿಕ ಪ್ರಯೋಗಾಲಯ ಮಂಜೂರು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ದೆಹಲಿಯ ರಾಷ್ಟಿ್ರಯ ರೋಗ ನಿಯಂತ್ರಣ ಕೇಂದ್ರದಿಂದ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆಗಾಗಿ ಎನ್.ಸಿ.ಡಿ.ಸಿ. ಪರವಾಗಿ ಬೆಂಗಳೂರು ಶಾಖೆಯ ಡಾ ರಾಜೇಶ ಕಡೆಮನಿ ಮತ್ತು ಕಿಮ್್ಸ ನಿರ್ದೇಶಕ ಡಾ ಎಸ್.ಎಫ್ ಕಮ್ಮಾರ್ ನಡುವೆ ಒಂಡಂಬಡಿಕೆಗೆ ಶುಕ್ರವಾರ ಸಹಿ ಹಾಕಲಾಯಿತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸತತ ಪ್ರಯತ್ನದ ಫಲವಾಗಿ ಈ ಅತ್ಯಾಧುನಿಕ ಪ್ರಯೋಗಾಲಯ ಹುಬ್ಬಳ್ಳಿಗೆ ದೊರಕಿದೆ. ಈ ರಾಷ್ಟಿ್ರಯ ವೈರಾಣು ಸಂಶೋಧನಾ ಮತ್ತು ರೋಗ ನಿಯಂತ್ರಣ ಕೇಂದ್ರ ದೇಶದ 8 ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ.

ಸಾಂಕ್ರಾಮಿಕ ರೋಗಗಳಾದ ಎಚ್.-1, ಎನ್.-1 , ಕರೋನಾ, ಚಿಕನ್ ಗುನ್ಯಾ, ನಿಫಾದಂತಹ ಸಾಂಕ್ರಾಮಿಕ ರೋಗಗಳು ತಮ್ಮ ರಚನೆಯಲ್ಲಿ ಬದಲಾವಣೆಗೊಂಡು ಮತ್ತೆ ಮತ್ತೆ ಹರಡುತ್ತಿರುವ ಕಾರಣ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯಕ್ಕಾಗಿ ದೂರದ ಪ್ರದೇಶಗಳಿಗೆ ಅಲೆಯುವುದರಿಂದ ರೋಗ ಪೀಡಿತರ ಪರಿಸ್ಥಿತಿ ಬಿಗಡಾಯಿಸುತ್ತಿತ್ತಲ್ಲದೆ, ಪ್ರಾಣ ಹಾನಿಯಂತಹ ಸಂಭವನಿಯತೆ ಹೆಚ್ಚಿರುತ್ತದೆ.

ಈ ಮೊದಲು ಪುಣೆ ಮತ್ತು ಬೆಂಗಳೂರಿನಲ್ಲಿನ ಶಾಖೆಗಳಲ್ಲಿ ಸಂಶೋಧನೆ ಮತ್ತು ರೋಗ ನಿರ್ಣಯ ಕೈಕೊಳ್ಳಬೇಕಾಗಿತ್ತು. ಸದ್ಯ ದೇಶದಲ್ಲಿ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್​ಫ್ರಾಸ್ಟಕ್ಚರ್ ಮಿಶನ್ ಅಡಿ ಬಿ.ಎಸ್.ಎಲ್. 3 ಫೇಸಿಲಿಟಿಸ್ ಮಾದರಿಯ ಒಟ್ಟು 13 ಹೊಸ ಅಂದರೆ 4 ಮೊಬೈಲ್ ಪ್ರಯೋಗಾಲಯ ಮತ್ತು 9 ಸಾಂಸ್ಥಿಕ ಪ್ರಯೋಗಾಲಯಗಳನ್ನು ಸ್ಥಾಪಿಸಲು ಆಯ್ಕೆ ಮಾಡಿಕೊಂಡ ಸಂಸ್ಥೆಗಳಲ್ಲಿ ಹುಬ್ಬಳ್ಳಿಯ ಕಿಮ್್ಸ ಕೂಡ ಸೇರಿದೆ.

ಕಿಮ್್ಸ ಆಸ್ಪತ್ರೆ ಉತ್ತರ ಕರ್ನಾಟಕದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿತ್ಯ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಸಾವಿರಾರು ರೋಗಿಗಳು ಇಲ್ಲಿಗೆ ಬರುತ್ತಾರೆ. ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವವ ಮಧ್ಯೆ ಕಿಮ್್ಸ ಆಸ್ಪತ್ರೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ವೇಗವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಯು ಈ ಭಾಗದ ಜನರಿಗೆ ಸಂಜೀವಿನಿಯಾಗಿದೆ.

ಈಗ ಈ ಹೊಸ ಸೌಲಭ್ಯಕ್ಕಾಗಿ ಕಿಮ್್ಸ ಅವರಣದಲ್ಲಿ 27 ಗುಂಟೆ ಜಾಗ ಮೀಸಲಿರಿಸಿದ್ದು. ಸಂಪೂರ್ಣ ಕೇಂದ್ರ ಪ್ರಾಯೋಜಿತ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯದ ಶಾಖೆಗೆ ಅಂದಾಜು 16 ಕೋಟಿ ರೂ. ವೆಚ್ಚವಾಗಲಿದೆ.

ಹಿಂದಿನ ಕೇಂದ್ರ ಆರೋಗ್ಯ ಸಚಿವಜಗತ್ ಪ್ರಕಾಶ ನಡ್ಡಾ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿನಂತಿಸಿದ್ದ ಪರಿಣಾಮವಾಗಿ ಈ ಪ್ರಾದೇಶಿಕ ಪ್ರಯೋಗಾಲಯ ಮಂಜೂರಾಗಿದ್ದು, ಕರ್ನಾಟಕ ಸರ್ಕಾರ ಜಾಗ ಮಂಜೂರಿ ಮಾಡಿದೆ. ಕೇಂದ್ರ ಆರೋಗ್ಯ ಸಚಿವರನ್ನು ಅಭಿನಂದಿಸಿರುವ ಪ್ರಲ್ಹಾದ ಜೋಶಿ, ಆದಷ್ಟು ಬೇಗನೆ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯದ ಶಾಖೆಯ ಭೂಮಿ ಪೂಜೆ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.