ಹೊಸಕೋಟೆ&ಶಿಡ್ಲಟ್ಟ ಹೆದ್ದಾರಿ ಅಂಚಿನಲ್ಲಿರುವ ಅರಣ್ಯ ವ್ಯಾಪ್ತಿಯ ಇ.ಮುತ್ಸಂದ್ರದ ಸರ್ವೇ ನಂ. 79ರಲ್ಲಿ ಜೆಸಿಬಿ ಬಳಸಿ ಫಲವತ್ತಾದ ಕೆಂಪು ಮಣ್ಣು ಲೂಟಿ ಮಾಡುತ್ತಿರುವುದು. 
ಜಿಲ್ಲೆ

ಅರಣ್ಯದಲ್ಲಿ ಕೆಂಪು ಮಣ್ಣು ಲೂಟಿ!

ಬೆಂಗಳೂರು ಗ್ರಾಮಾಂತರ ಡೆಸ್ಕ್

ಎಂ. ರಾಮೇಗೌಡ ನಂದಗುಡಿ

ಹೊಸಕೋಟೆ ತಾಲೂಕು ವ್ಯಾಪ್ತಿಯ ಹೊಸಕೋಟೆ&ಶಿಡ್ಲಟ್ಟ ರಾಜ್ಯ ಹೆದ್ದಾರಿ ಅಂಚಿನಲ್ಲಿರುವ ಇ.ಮುತ್ಸಂದ್ರದ ಸರ್ವೇ ನಂ.79ರ ಅರಣ್ಯ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ ಫಲವತ್ತಾದ ಕೆಂಪು ಮಣ್ಣು ಲೂಟಿ ಮಾಡಲಾಗುತ್ತಿದೆ. ಮಣ್ಣು ಲೂಟಿಯಿಂದ ಗಿಡಮರಗಳಿಗೂ ಕೊಡಲಿ ಪೆಟ್ಟು ಬೀಳುತ್ತಿದ್ದು, ಅರಣ್ಯ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಡೂಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸರ ಮತ್ತು ಅರಣ್ಯ ಸಂರಕ್ಷಣೆಗೆ ಸರ್ಕಾರ ಸಾವಿರಾರು ಕೋಟಿ ರೂ. ಅನುದಾನ ಮೀಸಲಿಟ್ಟು ಇಲಾಖೆಗೆ, ಸಚಿವರು ಅಧಿಕಾರಿಗಳು ಸೇರಿ ಅರಣ್ಯ ರಕ್ಷಕರ ವೇತನಕ್ಕೆ ವಸತಿ ಇನ್ನಿತರ ಸೌಲಭ್ಯ ಕಲ್ಪಿಸಿದೆ. ಆದರೆ ಇಲ್ಲಿ ಕೆಂಪು ಮಣ್ಣಿಗಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಇಲಾಖೆ ತುಟಿಬಿಚ್ಚುತ್ತಿಲ್ಲ.

ಕೆಂಪುಮಣ್ಣು ಗುಡ್ಡ: ಹೆದ್ದಾರಿ ಅಂಚಿನಲ್ಲಿರುವ ಅರಣ್ಯ ವ್ಯಾಪ್ತಿಯಲ್ಲಿ ಫಲವತ್ತಾದ ಕೆಂಪು ಮಣ್ಣಿನ ಗುಡ್ಡದ ನಿೇಪವಿರುವ ಮಾಹಿತಿ ಮೇರೆಗೆ ಲೂಟಿ ಕೋರರು ಮಣ್ಣು ತೆಗೆಯುತ್ತಿದ್ದಾರೆ. ಸರ್ಕಾರದಿಂದಲೇ ಲಾಂತರ ರೂಪಾಯಿ ಖರ್ಚು ಮಾಡಿ ಅರಣ್ಯೀಕರಣ ಮಾಡಿರುವ ಜಾಗದಲ್ಲೇ ಮರಗಳನ್ನು ಕಡಿದು ಮಣ್ಣು ತೆಗೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದರಿಂದ ಅಕ್ರಮದ ಹಿಂದೆ ಅಧಿಕಾರಿಗಳ ಸಾಥ್​ ಇದೆಯೇ ಎಂಬ ಅನುಮಾನ ಸಾರ್ವಜನಿಕ ವಲಯಲ್ಲಿ ಹರಿದಾಡುತ್ತಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರ್ನಿಲಕ್ಷ್ಯವೇ? : ರಸ್ತೆಯ ಪಕ್ಕದಲ್ಲಿಯೇ ಈ ಅಕ್ರಮ ಕಾರ್ಯ ನಡೆಸುತ್ತಿರುವುದು ದಾರಿ ಹೋಕರಿಗೆ ಕಾಣುತ್ತಿದೆ, ಅರಣ್ಯ ಸಂಪತ್ತು ಲೂಟಿ ಮಾಡುವುದನ್ನು ತಡೆಯಲು ಅನೇಕ ಬಾರಿ ಗಲಾಟೆಗಳು ನಡೆದಿವೆ. ಈ ಪ್ರದೇಶದಲ್ಲಿ ಮಣ್ಣು ಅಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆಯದೇ ಮಣ್ಣು ಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ, ಇದೇ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುವ ಸ್ಥಳದಿಂದ ಅನತಿ ದೂರದಲ್ಲಿ ಅರಣ್ಯ ಇಲಾಖೆಯವರು ನರ್ಸರಿ ಮಾಡಿ ಸಸಿ ಬೆಳೆಸುತ್ತಿದ್ದರೂ ಇತ್ತ ಗಮನ ಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರೈತರಿಗೆ ಫಲವತ್ತಾದ ಕೆಂಪು ಮಣ್ಣಿಗೆ ಸಾಕಷ್ಟು ಬೇಡಿಕೆಯಿದ್ದು, ಟನ್​ಗೆ ಸಾವಿರಾರು ರೂಪಾಯಿ ಬೆಲೆ ಇದೆ. ರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆಯವರೇ ಗಿಡಮರಗಳನ್ನು ನಾಶ ಮಾಡಿ ಹಾಡಹಗಲೇ ಮಣ್ಣು ತೆಗೆಯತ್ತಿರುವುದು ಎಷ್ಟು ಸರಿ? ಸಾರ್ವಜನಿಕರು ತಪ್ಪು ಮಾಡಿದರೆ ಪ್ರಕರಣ ದಾಖಲಿಸುವ ಅಧಿಕಾರಿಗಳು ಅವರೇ ತಪು$್ಪ ಮಾಡುತ್ತಿದ್ದಾರೆ. ಇವರಿಗೆ ಶಿೆ ನೀಡುವವರು ಯಾರು? | ಹಕ್ಕಲೇಗೌಡ ರೈತ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ, ಹೊಸಕೋಟೆ ಇ.ಮುತ್ಸಂದ್ರದ ಸರ್ವೇ ನಂ.79ರ ಅರಣ್ಯ ಪ್ರದೇಶದಲ್ಲಿ ಕೆಂಪು ಮಣ್ಣು ತೆಗೆಯುತ್ತಿರುವ ಬಗ್ಗೆ ಇದುವರೆಗೂ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸ್ಥಳಿಯ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು, ಕಾನೂನು ಕ್ರಮ ಕೈಗೊಳ್ಳಲಾಗುವುದು. | ಸಂತೋಷ್​ ಅರಣ್ಯಾಧಿಕಾರಿ, ಬೆಂ. ಗ್ರಾಮಾಂತರ ಜಿಲ್ಲೆ