ಜಿಲ್ಲೆ

ಸೇವೆ, ಮಾನವೀಯತೆಯೇ ರೆಡ್​ ಕ್ರಾಸ್​ನ ತತ್ತ್ವ...

ಪ್ರೊ. ನಿಕೇತನಾ ಅಭಿಪ್ರಾಯ

ನೀಲಾವರದಲ್ಲಿ ವಾರ್ಷಿಕ ಶಿಬಿರ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಾನವೀಯ ನೆಲೆಯಲ್ಲಿ ಜನಸೇವೆ ಮಾಡುವುದು ರೆಡ್​ ಕ್ರಾಸ್​ನ ಮುಖ್ಯ ಉದ್ದೇಶವಾಗಿದೆ. ಶಾಂತಿ, ಸ್ವಾತಂತ್ರ್ಯ ಮತ್ತು ಐಕ್ಯತೆ ರೆಡ್​ ಕ್ರಾಸ್​ನ ಮೂಲ ತತ್ತ್ವಗಳಾಗಿವೆ. ಅದನ್ನು ಅರ್ಥಮಾಡಿಕೊಂಡು ಸ್ವಯಂ ಸೇವಕರು ರೆಡ್​ ಕ್ರಾಸ್​ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಉಡುಪಿಯ ಡಾ. ಜಿ.ಶಂಕರ್​ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ನಿಕೇತನಾ ಸಲಹೆ ನೀಡಿದರು.

ನೀಲಾವರದಲ್ಲಿರುವ ಗೋವರ್ಧನ ಗೋಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್​ ಕ್ರಾಸ್​ನ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್​ ಎಸ್​. ನಾಯ್ಕ ಮಾತನಾಡಿ, ಸಹಬಾಳ್ವೆ, ಮಾನವೀಯತೆ ಹಾಗೂ ಸೇವೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮಣಿಪಾಲ ಅಕಾಡೆಮಿ ಆಫ್​ ಜನರಲ್​ ಎಜುಕೇಶನ್​ನ ಬಿ.ಪಿ. ವರದರಾಯ್​ ಪೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಕೆ.ಬೇಬಿ, ಗೀತಾ ಬಾಳಿಗ, ಡಾ. ಮಲ್ಲಿಕಾ ಎ. ಶೆಟ್ಟಿ, ರೆಡ್​ ಕ್ರಾಸ್​ನ ಯೋಜನಾಧಿಕಾರಿ ದೀಪಿಕಾ ಉಪಸ್ಥಿತರಿದ್ದರು.

ಪ್ರಜ್ಞಾ ಸ್ವಾಗತಿಸಿದರು. ಪುಣ್ಯಾ ವಂದಿಸಿದರು. ದಿಶಾ ಕಾರ್ಯಕ್ರಮ ನಿರೂಪಿಸಿದರು.