ಜಿಲ್ಲೆ

ದೊಡ್ಡ ಕಂಪನಿಗಳಿಗೆ ರೆಡ್​ಕಾರ್ಪೆಟ್: ಅಂಬಾನಿ, ಅದಾನಿ, ಬಿರ್ಲಾ, ಪತಂಜಲಿ ಗ್ರೂಪ್​ಗೆ ಮುಖ್ಯಮಂತ್ರಿ ಆಹ್ವಾನ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಜ್ಯದಲ್ಲಿ ಗರಿಷ್ಠ ಮಟ್ಟದಲ್ಲಿ ಬಂಡವಾಳ ಹೂಡಿಕೆಯಾಗಬೇಕು, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಬೇಕೆಂಬ ನಿಟ್ಟಿನಲ್ಲಿ ಹತ್ತು ಹಲವು ಸುಧಾರಣಾ ಕ್ರಮ ಕೈಗೊಂಡಿದ್ದ ರಾಜ್ಯ ಸರ್ಕಾರ, ಇದೀಗ ದೇಶದ ದೊಡ್ಡ ದೊಡ್ಡ ಕಂಪನಿಗಳಿಗೆ ರೆಡ್​ಕಾರ್ಪೆಟ್ ಹಾಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 55 ಕಂಪನಿಗಳಿಗೆ ವೈಯಕ್ತಿಕ ಪತ್ರ ಬರೆದಿದ್ದು, ಕೈಗಾರಿಕೆ ಸ್ಥಾಪನೆಗೆ ರಾಜ್ಯದಲ್ಲಿ ನಿಯಮ ಎಷ್ಟು ಸುಲಲಿತವಾಗಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಇಂಡಸ್ಟ್ರಿಯಲ್ ಟೈಕೂನ್​ಗಳು ಎನಿಸಿಕೊಂಡಿರುವ ಮುಕೇಶ್ ಅಂಬಾನಿ, ಸುನೀಲ್ ಭಾರತಿ ಮಿತ್ತಲ್, ಸಂಜೀವ್ ಪುರಿ, ಅಜೀಮ್ ಪ್ರೇಮ್ೕ, ಎಸ್.ಸುಬ್ರಮಣ್ಯನ್, ರಾಹುಲ್ ಬಜಾಜ್, ಆನಂದ್ ಮಹೀಂದ್ರ, ನವೀನ್ ಜಿಂದಾಲ್, ಕುಮಾರ ಮಂಗಲಂ ಬಿರ್ಲಾ, ಗೌತಮ್ ಅದಾನಿ, ಎ.ಬಾಲಕೃಷ್ಣನ್ ಅವರಿಗೆ ಪತ್ರ ಬರೆದಿರುವ ಬಿಎಸ್​ವೈ, ಮುಕ್ತ ಆಹ್ವಾನ ನೀಡಿದ್ದಾರೆ.

ಕಳೆದ ತಿಂಗಳಷ್ಟೇ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್​ಗೆ ಸಂಬಂಧಪಟ್ಟಂತೆ ಕೈಗೊಂಡ ಕ್ರಮಗಳನ್ನು ತಕ್ಷಣದಿಂದಲೇ ಜಾರಿ ಮಾಡಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಬಳಿಕ ವಿಧಾನಸಭೆ ಅಧಿವೇಶನದಲ್ಲಿ ಕಾನೂನು ರೂಪ ಕೊಟ್ಟಿತ್ತು. ಸರ್ಕಾರದ ಉನ್ನತ ಮಟ್ಟದ ಸಮಿತಿ ಅನುಮತಿಯಿಂದ ಉದ್ಯಮ ಆರಂಭಿಸಬಹುದು, ಬೇರೆ ಯಾವುದೇ ಇಲಾಖೆ ಮಂಡಳಿಯಿಂದ ಅನುಮತಿ ಬೇಡವಾಗುತ್ತದೆ. ಜತೆಗೆ ಅನೇಕ ರಿಯಾಯಿತಿ ಪ್ರಕಟಿಸಲಾಗಿದೆ. ಈ ಸಂಗತಿಯನ್ನು ಉದ್ಯಮಿಗಳಿಗೆ ಪತ್ರದಲ್ಲಿ ಸಿಎಂ ತಿಳಿಸಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆಹಾರ ಸಂಸ್ಕರಣೆ, ಸಾಫ್ಟ್​ವೇರ್, ಫಾರ್ವಸ್ಯುಟಿಕಲ್, ಆಟೋ ಕಾಂಪೋನೆಂಟ್ಸ್, ಕಟ್ಟಡ ಸಾಮಗ್ರಿ, ಕೆಮಿಕಲ್ಸ್, ಎಲೆಕ್ಟ್ರಾನಿಕ್ಸ್ ಸೇರಿ ಹಲವು ಕ್ಷೇತ್ರದಲ್ಲಿ ತೊಡಗಿಕೊಂಡ ಕಂಪನಿಗಳಿಗೆ ಬಂಡವಾಳ ಹೂಡಿಕೆಗೆ ಮುಕ್ತ ಆಹ್ವಾನ ನೀಡಲಾಗಿದೆ.

ಚೈನಾ ಪ್ರಸ್ತಾಪ

ಕೋವಿಡ್-19 ಸಂದರ್ಭದಲ್ಲಿ ಭೌಗೋಳಿಕ ವಿಚಾರದಲ್ಲಿ ಚೈನಾದಿಂದ ಎದುರಾದ ಸವಾಲು ಮತ್ತು ಟ್ರೇಡ್ ವಾರ್, ದೇಶದ ಸ್ವಾವಲಂಬನೆಯ ಸಂಕಲ್ಪವನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಸ್ಥಳೀಯ ಉತ್ಪಾದನೆಗೆ ಆತ್ಮನಿರ್ಭರ ಅಭಿಯಾನ ಪ್ರೋತ್ಸಾಹ ನೀಡುತ್ತಿದ್ದು, ಈ ಸಂದರ್ಭ ಸದುಪಯೋಗಪಡಿಸಿಕೊಳ್ಳುವಂತೆ ಕಂಪನಿಗಳಿಗೆ ರಾಜ್ಯ ಸರ್ಕಾರ ಕೋರಿದೆ.

ಯಾರಿಗೆಲ್ಲ ಆಹ್ವಾನ?

ರಿಲಯನ್ಸ್, ಭಾರತಿ ಎಂಟರ್​ಪ್ರೖೆಸಸ್ ಗ್ರೂಪ್, ಐಟಿಸಿ, ವಿಪ್ರೋ, ಎಲ್ ಆಂಡ್ ಟಿ, ಬಜಾಜ್, ಜಿಂದಾಲ್, ಹೀರೋ, ಟೊರೆಂಟ್, ವೇದಾಂತ, ಟಾಟಾ, ಆದಿತ್ಯ ಬಿರ್ಲಾ, ಪಿರಾಮಲ್, ಎಂಆರ್​ಎಫ್, ಕಲ್ಯಾಣಿ, ಅದಾನಿ, ಮುರುಗಪ್ಪ ಗ್ರೂಪ್, ಪತಂಜಲಿ, ಟಿವಿಎಸ್, ಹಿಂದುಜಾ, ಗೋದ್ರೆಜ್, ಹಿಂದುಸ್ತಾನ್ ಲಿವರ್, ಇನ್ಪೋಸಿಸ್, ಎಚ್​ಸಿಎಲ್, ನೆಸ್ಲ್ಲೆ, ಸನ್ ಫಾರ್ವಸ್ಯುಟಿಕಲ್, ಡಾಬರ್, ಸಿಪ್ಲ, ಐಷರ್ ಮೋಟರ್, ಮೈಕ್ರೋ ಲಿಮಿಟೆಡ್, ಎಸಿಸಿ, ಎಂಫೆಸಿಸ್, ಎಸ್ಕಾರ್ಟ್, ಮಾರುತಿ ಸುಜುಕಿ, ಬೋಷ್, ಎಬಿಬಿ, ದಾಲ್ಮಿಯಾ.

ರಾಜ್ಯ ನೀಡಿದ ಆಫರ್ ಏನು?

2020-25ಗೆ ಅನ್ವಯವಾಗುವಂತೆ ಕರ್ನಾಟಕವು ಹೊಸ ಕೈಗಾರಿಕೆ ನೀತಿಯನ್ನು ಅಳವಡಿಸಿಕೊಂಡಿದೆ. ಇದು ಹೂಡಿಕೆಗೆ ಯೋಗ್ಯ ಕಾಲ ಮತ್ತು ಯೋಗ್ಯ ಸ್ಥಳ ಎಂದು ಬಿಂಬಿಸಲಾಗಿದೆ. ್ಝಲ್ಲ ಕ್ಷೇತ್ರಕ್ಕೂ ಆರ್ಥಿಕ ಪ್ರೋತ್ಸಾಹ. 10 ವರ್ಷಗಳ ಅವಧಿಯ ಹೂಡಿಕೆಗೆ ಶೇ.2.25 ಸಬ್ಸಿಡಿ. ್ಝೈಗಾರಿಕೆ ಎಕೋ ಸಿಸ್ಟಂ ಸಿದ್ಧವಿದೆ. ಕೈಗಾರಿಕೆ ಸ್ಥಾಪನೆಗೆ 10 ಸಾವಿರ ಎಕರೆಯಷ್ಟು ಭೂಮಿ ಸಿದ್ಧ. ್ಝಾನೂನು ಕಾಯ್ದೆ ಸರಳಿಕರಿಸಿದ್ದು, ಉನ್ನತವಾದ ಕೌಶಲಪೂರ್ಣ ಮಾನವ ಸಂಪನ್ಮೂಲ ಲಭ್ಯತೆ. ್ಝಾಜ್ಯದಲ್ಲಿ 2 ಕೈಗಾರಿಕೆ ಕಾರಿಡಾರ್​ಗಳಿದ್ದು, ಉತ್ತಮ ಸರಕು ಸಾಗಣೆ ನೆಟ್​ವರ್ಕ್ ವ್ಯವಸ್ಥೆ. ್ಝಸ್ ಆಫ್ ಡೂಯಿಂಗ್ ಬಿಜಿನೆಸ್ ಇನ್ನಷ್ಟು ಸರಳೀಕರಣ. ವಿವಿಧ ಅನುಮತಿ ಪಡೆಯಲು 3 ವರ್ಷದ ಅವಕಾಶದೊಂದಿಗೆ ಕೈಗಾರಿಕೆ ಆರಂಭ ಅವಕಾಶ. ್ಝೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರ ನೇರ ಸಂಪರ್ಕ. ರ್ಚಚಿಸಿ ಇನ್ನಷ್ಟು ರಿಯಾಯಿತಿ.