ಜಿಲ್ಲೆ

ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ನೇಮಕ

ಉತ್ತರ ಕನ್ನಡ ಡೆಸ್ಕ್

ಶಿಗ್ಗಾಂವಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನೊಳಗೊಂಡು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ ಹಳೆಯ ವಿದ್ಯಾರ್ಥಿಗಳ ಸಂಘದ ಸಹಕಾರ ಅಭಿನಂದನೀಯ ಎಂದು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪ್ರೊ. ಪಿ.ಸಿ. ಹಿರೇಮಠ ಹೇಳಿದರು.

ಇಲ್ಲಿನ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲದಲ್ಲಿ ಶನಿವಾರ ಏರ್ಪಡಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ಬಿ.ವೈ. ತೊಂಡಿಹಾಳ ಮಾತನಾಡಿ, ಕಾಲೇಜಿನ ಉಪನ್ಯಾಸಕರ ಜತೆಗೆ ಉತ್ತಮ ಒಡನಾಟ ಹೊಂದಿರುವ ಹಳೆಯ ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆ ಅನುಕರಣೀಯ ಎಂದರು. ವಿನಯ ಎಚ್.ಕೆ., ರಾಜರತನ್ ದಾದುಗೌಡ್ರ, ಎನ್.ಎಫ್. ಬಂಕಾಪುರ, ಶೋಭಾ ಅಳಗವಾಡಿ ಇದ್ದರು. ಗೂಳಪ್ಪ ಅರಳಿಕಟ್ಟಿ ನಿರ್ವಹಿಸಿದರು.

ಪದಾಧಿಕಾರಿಗಳು: ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕರಡಿ, ಉಪಾಧ್ಯಕ್ಷರಾಗಿ ನಾಗರಾಜ ಬ್ರಹ್ಮಾವರ ಹಾಗೂ ಪರಿಮಳಾ ಜೈನ್, ಕಾರ್ಯದರ್ಶಿಯಾಗಿ ಎಸ್.ವಿ. ಕುಲಕರ್ಣಿ, ಸಹಕಾರ್ಯದರ್ಶಿಗಳಾಗಿ ವೀರೇಂದ್ರ ಕುಂದಾಪುರ, ಲಿಂಗರಾಜ ಕುನ್ನೂರ, ಸಂಘಟನಾ ಕಾರ್ಯದರ್ಶಿಯಾಗಿ ಗುರು ಅಂಗಡಿ ಹಾಗೂ ಗೂಳಪ್ಪ ಅರಳಿಕಟ್ಟಿ, ಖಜಾಂಚಿಯಾಗಿ ಹನುಮಂತಪ್ಪ ಬೆಂಗೇರಿ, ಸದಸ್ಯರಾಗಿ ಮಂಗಳಾ ಪಾಟೀಲ, ಶಿವಾನಂದ ವನಹಳ್ಳಿ, ಜಿಶಾನಖಾನ್ ಪಠಾಣ, ಅರವಿಂದ ಗುಡ್ಡಣ್ಣನವರ, ರಾಜು ಕೆಂಭಾವಿ, ಸುಮಂಗಲಾ ಅತ್ತಿಗೇರಿ, ಅಶೋಕ ಶಿಗ್ಗಾಂವ, ವೀರಣ್ಣ ಹಳೇಮನಿ, ಸುರೇಶ ಯಲಿಗಾರ, ಬಸವರಾಜ ಹಂಚಿನಾಳ, ಮಂಜುನಾಥ ದುಬೆ ಹಾಗೂ ಚನ್ನಮ್ಮ ಬಡ್ಡಿ ನೇಮಕವಾಗಿದ್ದಾರೆ.