ಜಿಲ್ಲೆ

ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ: ಅ.29ರಂದು ನಗರದಲ್ಲಿ ನೇರ ಸಂದರ್ಶನ

ಮಂಡ್ಯ: ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್‌ನಲ್ಲಿ ಖಾಲಿ ಇರುವ ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಆ.29ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಸಂಸ್ಥೆಯಲ್ಲಿ 20 ಹುದ್ದೆ ಖಾಲಿ ಇದ್ದು, ಪಿಯುಸಿ ಹಾಗೂ ಯಾವುದೇ ಪದವಿ ಹೊಂದಿರುವ 18 ರಿಂದ 30 ವರ್ಷದೊಳಗಿನವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ 15,500 ರೂ ವೇತನದ ಜತೆಗೆ ಇಎಸ್‌ಐ, ಪಿಎಫ್, ಪೆಟ್ರೋಲ್ ಭತ್ಯೆ ಹಾಗೂ ಇನ್ಸೆಂಟಿವ್ ನೀಡಲಾಗುವುದು. ಆಸಕ್ತರು ಅಗತ್ಯ ದಾಖಲಾತಿಯೊಂದಿಗೆ ಅಂದು ಬೆಳಗ್ಗೆ 10ಗಂಟೆಗೆ ಅಶೋಕನಗರ, ವಿವೇಕಾನಂದ ರಸ್ತೆ, 2ನೇ ಕ್ರಾಸ್‌ನಲ್ಲಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್‌ನಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.