ಜಿಲ್ಲೆ

25 ಹುದ್ದೆಗೆ ನೇಮಕಾತಿ: ಮೇ 23ರಂದು ನಗರದಲ್ಲಿ ಸಂದರ್ಶನ ಆಯೋಜನೆ

ಮಂಡ್ಯ: ಬಿ.ಎಸ್.ಎಸ್ ಮೈಕ್ರೋ ಫೈನಾನ್ಸ್ ಹಾಗೂ ಕ್ರೆಡಿಟ್ ಗ್ರಾಮೀಣ ಆಕ್ಸಿಸ್ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಮೇ 23ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಬಿ.ಎಸ್.ಎಸ್ ಮೈಕ್ರೋ ಫೈನಾನ್ಸ್‌ನಲ್ಲಿ 15 ಟ್ರೈನಿ ಸೆಂಟರ್ ಆಫೀಸರ್ಸ್ ಹುದ್ದೆ ಖಾಲಿ ಇದೆ. 18 ರಿಂದ 30 ವರ್ಷದೊಳಗಿನ ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅಂತೆಯೇ ಮಾಸಿಕ 17 ಸಾವಿರ ರೂನಿಂದ 25 ಸಾವಿರ ರೂ ವೇತನದ ಜತೆಗೆ ಊಟ, ವಸತಿ ಸೌಲಭ್ಯ ನೀಡಲಾಗುತ್ತಿದೆ.

ಕ್ರೆಡಿಟ್ ಗ್ರಾಮೀಣ ಆಕ್ಸಿಸ್ ಬ್ಯಾಂಕ್‌ನಲ್ಲಿ ರಿಲೇಷನ್‌ಷಿಪ್ ಆಫೀಸರ್ಸ್‌ನ 10 ಹುದ್ದೆ ಖಾಲಿ ಇವೆ. ಯಾವುದೇ ಪದವಿ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರುವ 18 ರಿಂದ 30 ವರ್ಷದೊಳಗಿನ ಪುರುಷ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ಆಯ್ಕೆಯಾದವರಿಗೆ 15 ಸಾವಿರ ರೂ ವೇತನದ ಜತೆಗೆ ಟಿ.ಎ, ಇನ್ಸೆಂಟಿವ್ಸ್, ಬೋನಸ್, ವಿಮೆ, ಇಎಸ್‌ಐ, ಪಿಎಫ್ ಸೌಲಭ್ಯ ಸಿಗಲಿದೆ. ಅರ್ಹರು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಯೊಂದಿಗೆ ಅಂದು ಬೆಳಗ್ಗೆ 10ಗಂಟೆಗೆ ಆರ್‌ಟಿಒ ಕಚೇರಿ ಎದುರಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದೆಂದು ಪ್ರಕಟಣೆ ತಿಳಿಸಿದೆ.