ಜಿಲ್ಲೆ

ಗ್ಯಾಂಗ್‌ಮನ್ ಎಂದು ನೇಮಕ ಮಾಡಿಕೊಳ್ಳಲಿ

ರಾಘವೇಂದ್ರಗೌಡ ಭೀ ಪಾಟೀಲ್

ಬೆಳಗಾವಿ: ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರನ್ನು ಗ್ಯಾಂಗ್‌ಮನ್ ಎಂದು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ಕೂಲಿ ಪೋರ್ಟರ್ಸ್ ಸಂಘಟನೆಯಿಂದ ಈಚೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಗೋಕಾಕ ಹಿಲ್ ಗಾರ್ಡನ್ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಖಾಸಗೀಕರಣದ ಪರಿಣಾಮವಾಗಿ ಹಮಾಲರು ಉದ್ಯೋಗ ಮತ್ತು ಆದಾಯದಲ್ಲಿ ಸಮಸ್ಯೆಎದುರಿಸುತ್ತಿದ್ದಾರೆ. ವಂದೇ ಭಾರತ್, ತೇಜಸ್ ರೈಲುಗಳ ಆರಂಭ, ಎಸ್‌ಐ ಕೋಚ್‌ಗಳ ಎಕ್ವಟ್, ಎಸ್ಕಲೇಟರ್‌ಗಳ ಅಳವಡಿಕೆ ಮುಂತಾದ ಬದಲಾವಣೆಗಳು ಹಮಾಲರ ಮೇಲೆ ಪ್ರಭಾವ ಬೀರುತ್ತಿವೆ. 2008ರಲ್ಲಿ ಹಮಾಲರನ್ನು ಗ್ಯಾಂಗ್‌ಮ್ಯಾನ್‌ಗಳಾಗಿ ನೇಮಕ ಮಾಡಿದಂತೆ ಈಗ ಮರುನೇಮಕಾತಿ ಮಾಡಬೇಕೆಂದು ಒತ್ತಾಯಿಸಿದರು. ಈ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದರು.

ಅಧ್ಯಕ್ಷ ಅಲಿದವಲಸಾಬ್ ನದಾಪ್, ಉಪಾಧ್ಯಕ್ಷ ಚಂದ್ರು ಛಲವಾದಿ, ಜಾಪರ್‌ಖಾನ್ ಜಮಖಾನವಾಲೆ, ಆನಂದ ರುದ್ರಪ್ಪನ್ನವರ, ಅಬ್ದುಲ್ ರಜಾಕ್ ಬಳ್ಳಾರಿ, ಮಂಜು ಸಿದ್ಧಾಪುರ, ಗೌಸ್‌ಮೋದಿನ್ ಅತಾರೆ, ಇಮಾಮ್‌ಸಾಬ್ ಮನಿಯಾರ್, ಶರೀಪ್ ನರನಂಗಿವಾಲೆ, ಗೌಸ್‌ಮೋದಿನ್ ಎಂ., ಸುರೇಶ ಹಂಸಿ ಇತರರಿದ್ದರು.