ಕೋಲಾರ: ಮಾರುಕಟ್ಟೆಯಲ್ಲಿ ಎಲ್ಲ ತರಕಾರಿ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. 15 ದಿನಗಳ ಹಿಂದೆ ಕುಸಿದಿದ್ದ ಎಲೆ ಕೋಸು ಬೆಲೆಯು ಈಗ ಏರಿಕೆ ಕಂಡಿದ್ದು, ಒಂದು ಟನ್ 1.5 ಲಕ್ಷ ರೂ.ವರೆಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.
ಬೇಸಿಗೆಯಲ್ಲಿ ಲಾಂತರ ಬಂಡವಾಳ ಹಾಕಿ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ನಾಟಿ ಮಾಡಿದ್ದ ಎಲೆಕೋಸು ಬೆಳೆಗೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಬೆಳೆಯ ಬುಡ ಕೊಳೆಯುವ ಅಂಡಾಣು ರೋಗಕ್ಕೆ ತುತ್ತಾಗಿ ಕಟಾವಿಗೆ ಬರಬೇಕಾದ ಎಲೆಕೋಸು ತೋಟದಲ್ಲಿಯೇ ಒಣಗುವಂತಾಯಿತು. ಇದರ ನಡುವೆ ಎಲೆಕೋಸು ಬೆಲೆ ದಿಢೀರನೆ 60 ರಿಂದ 50 ಸಾವಿರಕ್ಕೆ ಕುಸಿದಿತ್ತು. ಬೆಲೆ ಕುಸಿತ ಮತ್ತೊಂದು ಕಡೆ ತೇವಾಂಶದಿಂದ ಬುಡ ಕೊಳೆಯುವ ಅಂಡಾಣು ರೋಗದ ತೀವ್ರತೆಯಿಂದ ರೈತರಿಗೆ ಆತಂಕದ ಜತೆಗೆ ಬೆಳೆಗೆ ಹಾಕಿದ್ದ ಬಂಡವಾಳವೂ ಕೈ ಸೇರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಒಂದು ವಾರದಿಂದ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಕಂಡುಬರತೊಡಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಒಂದು ಟನ್ಗೆ 1.5 ಲಕ್ಷ ರೂ.ಗೆ ಮಾರಾಟವಾಗುತ್ತಿದೆ. ರೈತರ ಬಳಿ ಕೆಜಿಗೆ 15 ರೂ.ಗಳಂತೆ ಖರೀದಿ ಮಾಡುತ್ತಿರುವ ವ್ಯಾಪಾರಸ್ಥರು ಪ್ರತಿ ಕೆಜಿಗೆ 20 ರಿಂದ 25 ರೂ.ಗಳ ತನಕ ಮಾರಾಟ ಮಾಡುತ್ತಿದ್ದಾರೆ.
ಒಂದು ತಿಂಗಳಿನಿಂದ ಎಲ್ಲ ತರಕಾರಿಗಳ ಬೆಲೆಯೂ ಏರಿಕೆಯಾಗಿದ್ದು, ಟೊಮ್ಯಾಟೊ, ಹುರಳಿಕಾಯಿ, ಬೆಂಡೆಕಾಯಿ, ಮೂಲಂಗಿ ಸೇರಿ ಎಲ್ಲ ತರಕಾರಿಗಳು 50 ರಿಂದ 60 ರೂ.ಗಳ ತನಕ ಮಾರಾಟವಾಗುತ್ತಿವೆೆ. ಆದರೆ ರೈತರ ಕೈಗೆ 30 ರಿಂದ 40 ರೂ.ಗಳು ಮಾತ್ರ ಸಿಗುತ್ತಿದೆ.
ಕಳೆದ 20 ದಿನಗಳ ಹಿಂದೆ ಎಲೆಕೋಸು ಬೆಲೆ ಕುಸಿದಿತ್ತು. ಬೇಸಿಗೆಯಲ್ಲಿ ಲಾಂತರ ರೂ. ಖರ್ಚು ಮಾಡಿ ನಾರನ್ನು ನಾಟಿ ಮಾಡಿದ್ದರು. ಮಳೆ ಬಂದ ಕಾರಣ ತೇವಾಂಶ ಹೆಚ್ಚಾಗಿ ಬುಡ ಕೊಳೆಯುವ ಅಂಡಾಣು ರೋಗದಿಂದ ಗಿಡಗಳು ತೋಟದಲ್ಲಿಯೇ ಸಾಯುವಂತಹ ಪರಿಸ್ಥಿತಿಯು ನಿರ್ಮಾಣವಾಯಿತು. ಇದರ ನಡುವೆ ಟನ್ ಒಂದಕ್ಕೆ ಒಂದು ಲಕ್ಷ 30 ಸಾವಿರ ರೂ. ಇದ್ದ ಬೆಲೆ 50 ರಿಂದ 60 ಸಾವಿರ ರೂ.ಗೆ ಕುಸಿಯಿತು. ಈಗ ಬೆಲೆ ಏರಿಕೆ ಇರುವುದರಿಂದ ಅಂಡಾಣು ರೋಗದಿಂದ ಫಸಲು ಕಡಿಮೆಯಾದರು ಒಂದು ಟನ್ಗೆ 1.5 ಲಕ್ಷ ರೂ. ಬೆಲೆ ಇರುವುದರಿಂದ ರೈತರು ಚೇತರಿಸಿಕೊಳ್ಳುವಂತಾಗಿದೆ.
ಲಕ್ಷ್ಮೀ ನಾರಾಯಣ ಕಿತ್ತಂಡೂರು, ಕೋಲಾರ ತಾಲೂಕು