ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಮರ ಬಿದ್ದಿರುವುದು.  
ಜಿಲ್ಲೆ

124 ವರ್ಷದ ಬಳಿಕ ರಾಜ್ಯದಲ್ಲಿ ದಾಖಲೆ ಮಳೆ: ಐಎಂಡಿ ಅಂಕಿ ಅಂಶದಿಂದ ಬಹಿರಂಗ

ಹರೀಶ್​​ ಕೆ.ಸಿ.

ಬೆಂಗಳೂರು:ಶತಮಾನದ ಬಳಿಕ ಈ ಬಾರಿಯ ಪೂರ್ವ ಮುಂಗಾರು ಮತ್ತು ನೈಋತ್ಯ ಮುಂಗಾರು ರಾಜ್ಯದಲ್ಲಿ ಹಲವು ಸಾರ್ವಕಾಲಿಕ ದಾಖಲೆ ಬರೆದಿದೆ. ರಾಜ್ಯದ 7 ಜಿಲ್ಲೆಗಳಲ್ಲಿ 2025ರ ಮೇ ತಿಂಗಳ ಅವಧಿಯಲ್ಲಿ ಸಾರ್ವಕಾಲಿಕ ದಾಖಲೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

2025ರ ಮೇನಲ್ಲಿ ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ 764 ಮಿ.ಮೀ. ಮಳೆಯಾಗಿದೆ. 1918ರ ಮೇನಲ್ಲಿ 706 ಮಿ.ಮೀ. ಮಳೆಯಾಗಿತ್ತು. 124 ವರ್ಷದ ಬಳಿಕ ಕೊಪ್ಪಳದಲ್ಲಿ ದಾಖಲೆ ಮಳೆ ಸುರಿದಿದೆ. 1901ರ ಮೇನಲ್ಲಿ ಕೊಪ್ಪಳದಲ್ಲಿ 129 ಮಿ.ಮೀ. ಮಳೆಯಾಗಿತ್ತು. 2025ರ ಮೇನಲ್ಲಿ 165 ಮಿ.ಮೀ. ಮಳೆ ಸುರಿದಿದೆ. ಅಲ್ಲದೆ, 83 ವರ್ಷದ ಬಳಿಕ ಮೇ ಅವಧಿಯಲ್ಲಿ ರಾಜ್ಯಾದ್ಯಂತ ಅಧಿಕವಾಗಿ ವರ್ಷಧಾರೆಯಾಗಿದೆ. 2025ರ ಮೇನಲ್ಲಿ ರಾಜ್ಯಾದ್ಯಂತ 245 ಮಿ.ಮೀ. ಸುರಿದಿದೆ. 1943ರ ಮೇನಲ್ಲಿ 185 ಮಿ.ಮೀ. ಮಳೆಯಾಗಿತ್ತು. ಅಲ್ಲದೆ, ಮಾರ್ಚ್​ನಿಂದ ಮೇ ತಿಂಗಳವರೆಗೆ ವಿವಿಧ ಜಿಲ್ಲೆಗಳಲ್ಲಿ ದಾಖಲೆ ಮಳೆ ಸುರಿದಿರುವುದು ವರದಿಯಾಗಿದೆ.

ಎಲ್ಲೆಲ್ಲಿ ದಾಖಲೆ ಮಳೆ?:

1960ರ ಮೇನಲ್ಲಿ ಯಾದಗಿರಿಯಲ್ಲಿ ಸುರಿದಿದ್ದ 157 ಮಿ.ಮೀ. ದಾಖಲೆ ಮಳೆ ಸುರಿದಿತ್ತು. ಈ ಬಾರಿ 200 ಮಿ.ಮೀ. ಮಳೆಯಾಗಿದೆ. ವಿಜಯಪುರದಲ್ಲಿ 178 ಮಿ.ಮೀ. ಮಳೆ ಸುರಿದಿದೆ. ಇದು 1990ರ ಮೇನಲ್ಲಿ ಸುರಿದಿದ್ದ 158.3 ಮಿ.ಮೀ. ಮಳೆ ದಾಖಲೆಯನ್ನು ಹಿಂದಿಕ್ಕಿದೆ. ಬೀದರ್​ನಲ್ಲಿ 213 ಮಿ.ಮೀ. ದಾಖಲೆ ಮಳೆಯಾಗಿದ್ದು, ಹಿಂದೆ 1986ರಲ್ಲಿ ಸುರಿದಿದ್ದ 171.8 ಮಿ.ಮೀ. ದಾಖಲೆ ಮಳೆಯಾಗಿತ್ತು. ಬಾಗಲಕೋಟೆಯಲ್ಲಿ 1958ರ ಮೇನಲ್ಲಿ ಸುರಿದಿದ್ದ 131 ಮಿ.ಮೀ. ದಾಖಲೆ ಮಳೆಯನ್ನು ಈ ಬಾರಿಯ ಮೇ ತಿಂಗಳಿನಲ್ಲಿ ಸುರಿದ 148.9 ಮಿ.ಮೀ. ಮಳೆಯು ಹಿಂದಿಕ್ಕಿ ಇಲ್ಲೂ ದಾಖಲೆ ಸೃಷ್ಟಿ ಮಾಡಿದೆ.

ಮೇ ತಿಂಗಳಿನಲ್ಲಿ ಸುರಿದ ಮಳೆಯ ವಿವರ:

ಪ್ರದೇಶ              2025ರ ಮೇನಲ್ಲಿ (ಮಿಮೀಗಳಲ್ಲಿ )                  ಮಿಮಿಗಳಲ್ಲಿ ( ವರ್ಷ)

ಕರಾವಳಿ ಕರ್ನಾಟಕ         764                                                   690 (1918ರಲ್ಲಿ)

ಉತ್ತರ ಕರ್ನಾಟಕ          172                                                         151 (1943ರಲ್ಲಿ)

ಬಾಗಲಕೋಟೆ               148                                                            131 (1958)

ಬೀದರ್​                       213                                                              171 (1986)

ವಿಜಯಪುರ                   178                                                         158 (1990)

ಚಿಕ್ಕಮಗಳೂರು            415                                                               321 (1955)

ದಕ್ಷಿಣ ಕನ್ನಡ              994                                                                    845 (1918)

ಕೊಪ್ಪಳ                    165                                                                 129 (1901)

ಯಾದಗಿರಿ                200                                                              157 (1960)