ಜಿಲ್ಲೆ

ದಾಖಲೆ ಬರೆದ ತಬಸ್ಸುಮ್​ ನೀರಲಗಿ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಕಾಲೇಜ್ ಆಫ್ ಬಿಜಿನೆಸ್ ಆಡ್ಮಿನಿಸ್ಟ್ರೆಶನ್ 4ನೇ ಸೆಮಿಸ್ಟರ್ ವಿದ್ಯಾರ್ಥಿನಿ ತಬಸ್ಸುಮ್ ಅಬ್ದುಲ್ ಖಾನ್ ನೀರಲಗಿ ಅವರು ತಮ್ಮ ಅದ್ಬುತ ಜ್ಞಾನ ಪ್ರದರ್ಶಿಸಿ ಇಂಡಿಯಾ ಬುಕ್ ಆ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ್ದಾರೆ.

ಇಂಗ್ಲಿಷ್ ವರ್ಣಮಾಲೆಯಂತೆ ಕಣ್ಣುಮುಚ್ಚಿ ಜಗತ್ತಿನ ಎಲ್ಲ ದೇಶಗಳ ಹೆಸರುಗಳನ್ನು ಅತ್ಯಂತ ವೇಗವಾಗಿ ಪಠಿಸಿದ ಯುವತಿ ಎಂಬ ದಾಖಲೆಯನ್ನು "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಬರೆದಿದ್ದಾರೆ.

ಇವರು 1 ನಿಮಿಷ 17 ಸೆಕೆಂಡ್ ಗಳಲ್ಲಿ ಎ ಇಂದ ಜೆಡ್ ವರೆಗಿನ ವಿಶ್ವಸಂಸ್ಥೆಯ ಮಾನ್ಯತೆ ಪಡೆದ ಎಲ್ಲ 195 ದೇಶಗಳ ಹೆಸರುಗಳನ್ನು ಹೇಳಿದ್ದಾರೆ. ಈ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸಂಪಾದಕೀಯ ಮಂಡಳಿಯಿಂದ ಗುರುತಿಸಲ್ಪಟ್ಟಿದ್ದಾರೆ.

ಇವರ ಸಾಧನೆಗೆ ಕೆಎಲ್ಇ ಸಂಸ್ಥೆಯ ಬಿಜಿನೆಸ್ ಅಡ್ಮಿನಿಸ್ಟ್ರೇಶನ್ ಆಡಳಿತ ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿದೆ.