ಜಿಲ್ಲೆ

’ರಿಕಾನ್​ 2026’ ಎಕ್ಸ್ ಪೋ ಜ. 9,10 ಹಾಗೂ 11 ಕ್ಕೆ

ಹುಬ್ಬಳ್ಳಿ : ಕ್ರೆಡೈ ಸಂಸ್ಥೆಯ ವತಿಯಿಂದ ಜ. 9, 10 ಹಾಗೂ 11 ರಂದು ಹುಬ್ಬಳ್ಳಿ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್ ಎದುರಿನ 6 ಎಕರೆ ಪ್ರದೇಶದಲ್ಲಿ ’ರಿಕಾನ್​2026’ ಪ್ರಾಪರ್ಟಿ ಮತ್ತು ಕನ್​ಸ್ಟ್ರಕ್ಷನ್ ಮಟೀರಿಯಲ್​ಗಳ ಅತೀ ದೊಡ್ಡ ಎಕ್ಸ್​ಪೋ ಆಯೋಜಿಸಲಾಗಿದೆ ಎಂದು ಕ್ರೆಡೈ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷ ಗುರುರಾಜ ಅಣ್ಣಿಗೇರಿ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೆಡೈ ಯೂಥ್ ವಿಂಗ್​ನ ನೂತನ ಕೋರ್ ಕಮೀಟಿಯ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂದಾಜು 1.5 ಲಕ್ಷ ಚದರ ಅಡಿಯ ವಿಸ್ತೀರ್ಣದಲ್ಲಿ ಎಕ್ಸ್ ಪೋ ಅಯೋಜಿಸಲು ನಿರ್ಣಯಿಸಲಾಗಿದೆ. ಕಟ್ಟಡ ನಿಮಾಣ ಸಾಮಗ್ರಿಗಳಿಗೆ ಸಂಬಂಧಿಸಿದ 150 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಈಗಾಗಲೇ ಶೇ.50ರಷ್ಟು ಮಳಿಗೆಗಳು ಮಾರಾಟವಾಗಿವೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಉದ್ಯಮಿಗಳೂ ಪಾಲ್ಗೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲೆ ಮೊದಲ ಬೃಹತ್ ಎಕ್ಸ್ ಪೋ ಇದಾಗಿದೆ ಎಂದು ತಿಳಿಸಿದರು.

ಕ್ರೆಡೈ ಹು-ಧಾ ಘಟಕದ ವತಿಯಿಂದ ಅನೇಕ ಜನಪರ ಕೆಲಸಗಳನ್ನು ಮಾಡಲಾಗುತ್ತಿದೆ. ’ಹಸಿರು’ ಎಂಬ ಧ್ಯೇಯ ವಾಕ್ಯದಡಿ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ 200ಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ. ಬೈರಿದೇವರಕೊಪ್ಪದಿಂದ ಎಪಿಎಂಸಿವರೆಗೆ ಪ್ರದೇಶವನ್ನು ಮೀಡಿಯನ್ ಮಾಡಿಕೊಂಡು, 250 ಸಸಿಗಳನ್ನು ನೆಡಲಾಗಿದೆ. ತನ್ಮೂಲಕ ಕ್ರೆಡೈ ಸಂಸ್ಥೆ ಮನೆಗಳ ನಿಮಾಣದ ಜತೆಗೆ ಪರಿಸರ ನಿಮಾಣದ ನಿಮಾತೃವಾಗಿ ಹೊರ ಹೊಮ್ಮಿದೆ ಎಂದರು.

ಕ್ರೆಡೈ ಕರ್ನಾಟಕದ ನಿರ್ಗಮಿತ ಅಧ್ಯಕ್ಷ ಪ್ರದೀಪ ರಾಯ್ಕರ್ ಮಾತನಾಡಿ, ಮುಂಬರುವ ದಿನಗಳಲ್ಲಿ ಮಹಿಳಾ ಘಟಕವೂ ಅಸ್ತಿತ್ವಕ್ಕೆ ಬರಲಿದ್ದು, ಮಹಿಳೆಯರಲ್ಲಿನ ಪ್ರತಿಭೆಯನ್ನು ಹೊರ ತರಲು ಇದು ಸಹಕಾರಿ ಆಗಲಿದೆ ಎಂದರು.

ಕ್ರೆಡೈ ಯೂಥ್ ವಿಂಗ್​ನ ನೂತನ ಕೋ ಆರ್ಡಿನೇಟರ್ ಝುಾಯಿದ್ ಸಂಶಿ ಹಾಗೂ ಜಾಯಿಂಟ್ ಸೆಕ್ರೆಟರಿ ವಿನಾಯಕ ಚಾಟ್ನಿ ಮಾತನಾಡಿದರು.

ಕ್ರೆಡೈ ಹು-ಧಾ ಘಟಕದ ಚೇರ್ಮನ್ ಸಂಜಯ ಕೊಠಾರಿ, ಮೆಂಟರ್ ಇಸ್ಮಾಯಿಲ್ ಸಂಶಿ, ಪ್ರೆಸಿಡೆಂಟ್ ಇಲೆಕ್ಟ್ ಅಮೃತ ಮೆಹರವಾಡೆ, ಕ್ರೆಡೈ ಯೂಥ್ ವಿಂಗ್ ನ ನೂತನ ಕೋರ್ ಕಮೀಟಿಯ ಸೆಕ್ರೆಟರಿ ಗೌರವ ಕೊಠಾರಿ, ಕ್ರೆಡೈ ಯೂಥ್ ವಿಂಗ್​ನ ಸೂಫಿಯಾನ್ ಸಂಶಿ, ವಿಶಾಲ ಮೊಗಜಿಕೊಂಡಿ, ನಾಗೇಂದ್ರ ಹಬೀಬ, ತೇಜಸ್ ಕಲಬುರ್ಗಿ, ನಿಖಿಲ ಶೇಜವಾಡ್ಕರ್, ಕಾರ್ತಿಕ ಶೆಟ್ಟಿ, ರಾಜ್ ಜೈನ್, ವೃಷಭ ತೆಲಿಸಾರಾ, ಕೇದಾರ ಎಂ., ಅಭಿಷೇಕ ಮಗಜಿಕೊಂಡಿ ಹಾಗೂ ಇತರರು ಇದ್ದರು.