ಧಾರವಾಡ: ಜೀವದ ಹಂಗು ತೊರೆದು ಮಹಿಳೆಯ ಹತ್ಯೆ ಯತ್ನ ತಡೆದ ಯುವಕನ ಸಾಹಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಲೋಕೇಶ ಜಗಲಾಸರ್ ಪ್ರಶಂಸಿದ್ದಾರೆ.
ಕಲಘಟಗಿ ಪಟ್ಟಣದಲ್ಲಿ ಆ. ೧೮ರಂದು ವ್ಯಕ್ತಿಯೊಬ್ಬ ಹರಿತ ಆಯುಧದಿಂದ ಮಹಿಳೆಯ ಹತ್ಯೆಗೆ ಯತ್ನಿಸಿದ್ದ. ರುಸ್ತುಂಅಲಿ ಮಕ್ತುಂಖಾನ್ ಮಿಠಾಯಿಗಾರ ಎಂಬ ಯುವಕ, ಪ್ರಾಣದ ಹಂಗು ತೊರೆದು ಮಹಿಳೆಯ ಜೀವ ರಕ್ಷಿಸಿದ್ದಾನೆ. ಈ ವೇಳೆ ರುಸ್ತುಂಅಲಿಯ ಕೈಗೆ ಗಾಯವಾಗಿತ್ತು. ರುಸ್ತುಂಅಲಿಯ ನಾಗರಿಕ ಪ್ರಜ್ಞೆ ಮತ್ತು ಸಾಹಸವನ್ನು ಗುರುತಿಸಿರುವ ಎಸ್‌ಪಿ ಜಗಲಾಸರ್ ಅವರು ಪ್ರಶಂಸಾ ಪತ್ರ ನೀಡಿದ್ದಾರೆ. ಅಲ್ಲದೆ ಯುವಕನ ಹೆಸರನ್ನು ಜಿಲ್ಲಾ ಶೌರ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ಶಿಫಾರಸು ಮಾಡಿದ್ದಾರೆ.