ಆಲ್ದೂರು: ಹವ್ವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಲ್ದೂರು ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಆಯೋಜಿಸಲಾಗಿತ್ತು. ಆಲ್ದೂರು ಗ್ರಾಪಂ ಅಧ್ಯಕ್ಷೆ ಶ್ರೀದೇವಿಕುಮಾರ ಸ್ವಾಮಿ ಮಾತನಾಡಿ, ಮಕ್ಕಳಲಿರುವ ಪ್ರತಿಭೆ ಆನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಉಪಾಧ್ಯಕ್ಷ ಕೌಷಿಕ್ ಮಾತನಾಡಿ, ಮಕ್ಕಳು ಶಾಲಾ ಹಂತದಲ್ಲಿಯೇ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಸಾಧಕರಾಗಿ ಹೊರ ಹೊಮ್ಮುತ್ತಾರೆ. ಸ್ಪರ್ಧೆಯಲ್ಲಿ ಸೋಲು-ಗೆಲವು ಸಾಮಾನ್ಯ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವೇದಿಕೆ ಭಯ ಕಡಿಮೆ ಮಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತವೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಗ್ರಾಪಂ ಸದಸ್ಯರಾದ ಲಿಂಗೇಗೌಡ, ಸರೋಜಮ್ಮ, ಗಿರೀಶ್, ಶಿಕ್ಷಣ ಸಂಯೋಜಕಿ ಜಾನಕಮ್ಮ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕಿ ವನಜಾಕ್ಷಿ ,ಪುಷ್ಬಾವತಿ, ಸಿಆರ್‌ಪಿ ಕಮಲ, ಮುಖ್ಯ ಶಿಕ್ಷಕ ರವಿಕುಮಾರ್ ನಾಯಕ್,ಶಿಕ್ಷಕರಾದ ಪೂರ್ಣಿಮ, ಜಯರಾಮೇಗೌಡ ಮತ್ತಿತರರಿದ್ದರು.