ವಿಜಯಪುರ ನಗರದ ಹೊರವಲಯದ ಇಟ್ಟಂಗಿಹಾಳದಲ್ಲಿರುವ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಲೋಹಗಾಂವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಸಿಆರ್‌ಪಿ ಜ್ಯೋತಿ ಕೊಣ್ಣೂರು, ಸುರೇಖಾ ಗಿರಿಗೌಡರ, ಎನ್.ಜಿ. ಎರನಾಳ, ಅಶೋಕ ಭಜಂತ್ರಿ ಇತರರು ಇದ್ದರು. 
ಜಿಲ್ಲೆ

ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ

ವಿಜಯಪುರ: ಪ್ರತಿ ಮಕ್ಕಳು ನಕ್ಷತ್ರವಿದ್ದಂತೆ. ಒಂದಿಲ್ಲೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅವರಲ್ಲಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸುವ ಮೂಲಕ ಅವರ ಪ್ರೌಢಿಮೆ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಬೇಕು ಎಂದು ಎಕ್ಸಲಂಟ್ ಸಮೂಹ ಸಂಸ್ಥೆಗಳ ಪ್ರ. ಕಾರ್ಯದರ್ಶಿ ಹಾಗೂ ವೇದ ಅಕಾಡೆಮಿ ಅಧ್ಯಕ್ಷ ಡಾ. ಶಿವಾನಂದ ಎನ್. ಕೆಲೂರ ಹೇಳಿದರು.

ಗುರುವಾರ ನಗರದ ಹೊರ ವಲಯದ ಇಟ್ಟಂಗಿಹಾಳದಲ್ಲಿರುವ ಎಕ್ಸಲಂಟ್ ಆಂಗ್ಲ ಮಾಧ್ಯಮ ಹಾಗೂ ಪ್ರೌಢಶಾಲೆ ಆಶ್ರಯದಲ್ಲಿ ನಡೆದ 2023-24ನೇ ಸಾಲಿನ ಲೋಹಗಾಂವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ದೇಶದ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಸಂಯೋಜಕ ಎನ್.ಜಿ. ಎರನಾಳ ಮಾತನಾಡಿದರು. ಲೋಹಗಾಂವ ಸಿಆರ್‌ಪಿ ಜ್ಯೋತಿ ಕೊಣ್ಣೂರ, ಪ್ರಾಥಮಿಕ ಶಾಲೆ ಶಿಕ್ಷಕ ಸಂಘದ ಪ್ರ. ಕಾರ್ಯದರ್ಶಿ ಅಶೋಕ ಭಜಂತ್ರಿ, ಮುಖ್ಯಗುರು ರಾಜಶೇಖರ ವಿ.ಎಂ. ಎಸ್.ಬಿ. ಹೆಗಲಾಡಿ ಉಪಸ್ಥಿತರಿದ್ದರು. ಶಿಕ್ಷಕರಾದ ವೈ.ಎಸ್. ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಸುರೇಖಾ ಗಿರಿಗೌಡರ ನಿರೂಪಿಸಿದರು. ಪ್ರವೀಣ ಬಿರಾದಾರ ವಂದಿಸಿದರು.