ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವಿಕಲಚೇತನ ಅಧಿಕಾರಿಗಳ ಸಂಘದ ಸದಸ್ಯರ ಸಾಮಾನ್ಯ ಸಭೆ ಭಾನುವಾರ ಏರ್ಪಾಟಾಗಿತ್ತು.
ಸಂಘದ ಅಧ್ಯಕ್ಷ ರಾಜು ಶಲವಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಅಂಗವಿಕಲ ನೌಕರರ ಮುಂಬಡ್ತಿಗೆ ಸರ್ಕಾರ ಆದೇಶ ನೀಡಿದೆ. ನಮ್ಮ ಸಂಘದ ಸದಸ್ಯರ ಹೋರಾಟಕ್ಕೆ ಸಿಕ್ಕ ಮನ್ನಣೆ ಇದು. ಯಾವುದೇ ಸಮಸ್ಯೆ ಇರಲಿ, ಅದಕ್ಕೆ ತಕ್ಕುದಾದ ಹೋರಾಟದ ರೂಪುರೇಷೆ ಸಿದ್ಧಗೊಂಡಿದ್ದರೆ ಪರಿಹಾರ ಶೀಘ್ರವೇ ಲಭಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ ಎಂದರು.
ಉಪಾಧ್ಯಕ್ಷ ಡಾ. ಮಹೇಶ ಅಂಗಡಿ ಮಾತನಾಡಿ, ಎಲ್ಲ ಇಲಾಖೆಗಳಲ್ಲಿ ಸರ್ಕಾರದ ಆದೇಶವನ್ನು ಶೀಘ್ರವೇ ಜಾರಿ ಮಾಡಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಪಿ. ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರಿ ಅಂಗವಿಕಲ ಅಧಿಕಾರಿಗಳ ಸಂಘದ ಅಸ್ತಿತ್ವ ಕುರಿತು ವಿವರಿಸಿದರು.
ಅಲ್ಲದೇ ಹೋರಾಟ ಬಲಿಷ್ಠ ಗೊಳಿಸಲು ಜಿಲ್ಲಾಮಟ್ಟದಿಂದಲೇ ಸಂಘಟಿತರಾಗಬೇಕೆಂದು ತಿಳಿಸಿದರು.
ಎಸ್.ಬಿ. ಮೂಲೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಹುಬರಟ್ಟಿ ವಂದಿಸಿದರು.