ಸೋಮವಾರಪೇಟೆ: ಇಲ್ಲಿನ ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿ ಪ್ರಯುಕ್ತ ವಿರಕ್ತ ಮಠದ ಆವರಣದಲ್ಲಿ ಬಸವಜಯಂತಿ ಹಾಗೂ ವಚನಗಾಯನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ವಿರಕ್ತ ಮಠದ ಆವರಣದಿಂದ ಮೆರವಣಿಗೆ ಹೊರಟು ಕಕ್ಕೆಹೊಳೆ ಬಳಿ ಇರುವ ಬಸವೇಶ್ವರ ಪ್ರತಿಮೆಗೆ ಹಾರ ಹಾಕಿ ಪೂಜೆ ಮಾಡಲಾಯಿತು. ನಂತರ ಬಸವೇಶ್ವರ ದೇವಾಲಯದಲ್ಲಿ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ಬಸವೇಶ್ವರ ಯುವಕ ಸಂಘದ ವತಿಯಿಂದ ವಚನ ಗಾಯನ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಿರಕ್ತ ಮಠದ ಶ್ರೀ ನಿಶ್ಚಲದೇಶಿ ಕೇಂದ್ರ ಸ್ವಾಮೀಜಿ ವಹಿಸಿದ್ದರು. ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಕೆ.ಜೆ. ಗಿರೀಶ್, ವೀರಶೈವ ಸಮಾಜದ ಯಜಮಾನ ಬಿ.ಪಿ.ಶಿವಕುಮಾರ್, ಶೆಟ್ಟರಾದ ಬಿ.ಆರ್.ಮೃತ್ಯುಂಜಯ, ಅಕ್ಕನ ಬಳಗದ ಉಪಾಧ್ಯಕ್ಷೆ ಸರಿತಾ ಇದ್ದರು.