ರಾಯಚೂರು: ನಗರದ ಕ್ವಾಟೆ ದರ್ವಾಜದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಶರ್ೀ ಹಜರತ್ ಸೈಯದ್ ಷಾ ಅಲ್ಲಾವುದ್ದೀನ್ ಖಾದ್ರಿ ದರ್ಗಾದ ಸ್ವಾಗತ ಕಮಾನು ಸಂರಕ್ಷಿತ ಸ್ಮಾರಕದ ನಿಷೇತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಪುರಾತತ್ವ ಸಂರಕ್ಷಣಾ ಇಲಾಖೆ ಪುರಾತತ್ವ ಸಂರಕ್ಷಣಾ ಸಹಾಯಕಿ ಬಿ.ಎಂ.ಪ್ರೇಮಲತಾ ತಮ್ಮ ಸ್ಥಳ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಕೋಟೆ ಗೋಡೆಗೆ ಹೊಂದಿಕೊಂಡು ರಸ್ತೆಯಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡುತ್ತಿರುವುದಕ್ಕೆ ಬಿಜೆಪಿ ನಾಯಕರು ಮತ್ತು ಹಿಂದು ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಕುರಿತು ಜಿಲ್ಲಾಡಳಿತದಿಂದ ಪುರಾತತ್ವ ಇಲಾಖೆಗೆ ವರದಿ ನೀಡುವಂತೆ ತಿಳಿಸಿದ್ದರು.
ಇಲಾಖೆಯ ಕಲಬುರಗಿ ಉತ್ತರ ವಲಯದ ಪುರಾತತ್ವ ಸಂರಕ್ಷಣಾ ಸಹಾಯಕಿ ಬಿ.ಎಂ.ಪ್ರೇಮಲತಾ ಡಿ.2ರಂದು ಸೂಪರ್ ಮಾರ್ಕೆಟ್ ಹತ್ತಿರವಿರುವ ವಿವಾದಿತ ಸ್ವಾಗತ ಕಮಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೋಟೆ ಬಾಗಿಲು, ಕ್ವಾಟೆ ದರ್ವಾಜ ಸ್ಮಾರಕಕ್ಕೆ ಹೊಂದಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ.
ಸ್ಥಳ ಕೋಟೆಗೆ ಸೇರಿದ್ದು, ಸಂರಕ್ಷಿತ ಸ್ಮಾರಕದ 100 ಮೀ. ನಿಷೇತ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಕಾರಣ ಕಾಮಗಾರಿ ಕಾನೂನು ಬಾಹಿರವಾಗಿದೆ. ನಗರಸಭೆಯಿಂದ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಮುಂದಿನ ದಿನಗಳಲ್ಲಿ ಅನಕೃತ ಕಟ್ಟಡ ಕಾಮಗಾರಿ ತೆರವುಗೊಳಿಸುವಂತೆ ಇಲಾಖೆಯ ಕ್ಯೂರೇಟರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪುರಾತತ್ವ ಇಲಾಖೆ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಅಕಾರಿಗಳ ನಡುವಿನ ಪತ್ರ ವ್ಯವಹಾರದ ಬಗ್ಗೆ ಜಿಲ್ಲಾಕಾರಿ ಚಂದ್ರಶೇಖರ ನಾಯಕ ಹಾಗೂ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಗಮನಕ್ಕಿಲ್ಲ. ಆದರೆ ಪತ್ರ ಹೇಗೆ ಬಹಿರಂಗವಾಯಿತು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.