ಜಿಲ್ಲೆ

ಗ್ರಂಥಾಲಯಕ್ಕೆ 150 ಪುಸ್ತಕಗಳ ಪುಸ್ತಕ ಕೊಡುಗೆ

Mangaluru - Shravan Kumar Nala

ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ. ಸಮಿತಿ ವತಿಯಿಂದ ತೊಕ್ಕೊಟ್ಟುವಿನ ರಾಷ್ಟ್ರೋತ್ಥಾನ ಪರಿಷತ್‌ನ ಶಿಕ್ಷಣ ಸಂಸ್ಥೆ ಮಂಗಳೂರು ಒನ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಗ್ರಂಥಾಲಯಕ್ಕೆ 150 ಪುಸ್ತಕಗಳನ್ನು ಇತ್ತೀಚೆಗೆ ಕೊಡುಗೆ ನೀಡಲಾಯಿತು.

ಅಭಾಸಾಪ ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ವಿದ್ಯಾಕೇಂದ್ರದ ಪ್ರಾಂಶುಪಾಲೆ ವಿದ್ಯಾ ಕಾಮತ್ ಅವರಿಗೆ ಪುಸ್ತಕ ಹಸ್ತಾಂತರಿಸಿದರು. ದಾನಿಗಳಿಂದ ಉಪಯುಕ್ತ ಪುಸ್ತಕಗಳನ್ನು ಸಂಗ್ರಹಿಸಿ ಶಾಲಾ ಗ್ರಂಥಾಲಯಗಳಿಗೆ ಕೊಡುಗೆ ನೀಡುವ ಕಾರ್ಯಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಸಮಿತಿ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಿಗೆ ಪುಸ್ತಕ ನೀಡಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ‘ಮಾನವನ ಜ್ಞಾನಾಭಿವೃದ್ಧಿಗೆ ಗ್ರಂಥಾಲಯ ಬಹಳ ಮುಖ್ಯ. ಶಾಲಾ ಗ್ರಂಥಾಲಯಗಳಿಗೆ ಪುಸ್ತಕ ಕೊಡುಗೆ ನೀಡುವ ಕಾರ್ಯ ಶ್ಲಾಘನೀಯ ಎಂದರು.

ಉದ್ಯಮಿ ಕೆ.ನಾರಾಯಣ ಚೌಟ, ಅಭಾಸಾಪ ದ.ಕ. ಜಿಲ್ಲಾ ಸಮಿತಿ ಖಜಾಂಚಿ ಭಾಸ್ಕರ ರೈ ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಡಿ.ಎಸ್. ವಿದ್ಯಾಕೇಂದ್ರದ ಉಪ ಪ್ರಾಂಶುಪಾಲೆ ನಯನಾ ಮಾತಾಜಿ, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಪ್ರಖ್ಯಾತ್ ರೈ, ಶಾಲಾ ಗ್ರಂಥಪಾಲಕಿ ನೀತಾ ಕುಮಾರಿ ಉಪಸ್ಥಿತರಿದ್ದರು.

ಫೋಟೋ : ಎಂಎನ್‌ಜಿ- 25ಸೆಪ್-ಎಬಿಎಸ್‌ಪಿ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಗ್ರಂಥಾಲಯಕ್ಕೆ 150 ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಅಭಾಸಾಪ ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ, ವಿದ್ಯಾಕೇಂದ್ರದ ಪ್ರಾಂಶುಪಾಲೆ ವಿದ್ಯಾ ಕಾಮತ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉದ್ಯಮಿ ಕೆ.ನಾರಾಯಣ ಚೌಟ, ಅಭಾಸಾಪ ದ.ಕ. ಜಿಲ್ಲಾ ಸಮಿತಿ ಖಜಾಂಚಿ ಭಾಸ್ಕರ ರೈ ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಡಿ.ಎಸ್., ವಿದ್ಯಾಕೇಂದ್ರದ ಉಪ ಪ್ರಾಂಶುಪಾಲೆ ನಯನಾ ಮಾತಾಜಿ, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಪ್ರಖ್ಯಾತ್ ರೈ, ಶಾಲಾ ಗ್ರಂಥಪಾಲಕಿ ನೀತಾ ಕುಮಾರಿ ಉಪಸ್ಥಿತರಿದ್ದರು.