ಕುಂದಾಪುರ: ಕಾಡನ್ನು ನಾಶ ವಾಡುವ ಬದಲು ಬರಡು ನೆಲದಲ್ಲಿ ಕಾಡನ್ನು ಮರು ಹುಟ್ಟು ಹಾಕುವ ಬೀಜದ ಚೆಂಡು ತಂತ್ರಜ್ಞಾನವನ್ನು ನಾವು ಬಳಸಿಕೊಳ್ಳಬೇಕು ಎಂದು ಕುಂದಾಪುರ ವಲಯ ಗಸ್ತು ಅರಣ್ಯಾಧಿಕಾರಿ ವಾಲತಿ ಎಚ್. ಹೇಳಿದರು.
ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಂದಾಪುರ ಅರಣ್ಯ ಇಲಾಖೆ ವತಿಯಿಂದ ನಡೆದ ಬೀಜದ ಚೆಂಡು ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ವ್ಯಾನೇಜಿಂಗ್ ಟ್ರಸ್ಟಿ ಅನುಪವಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಡಾ.ರೂಪಾ ಶೆಣೈ ಉಪಸ್ಥಿತರಿದ್ದರು. ಸಹಶಿಕ್ಷಕಿ ಶಾಂತಾ ಸ್ವಾಗತಿಸಿ, ನಿರೂಪಿಸಿದರು.