ವಿಜಯವಾಣಿ ಸುದ್ದಿಜಾಲ ಸವಣೂರ
ವರ್ಷದ ಹಿಂದೆ ವಜಾಗೊಳಿಸಿದ್ದ ಪುರಸಭೆ ದಿನಗೂಲಿ ಪೌರ ಕಾರ್ವಿುಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪಟ್ಟಣದಲ್ಲಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ‘ಪುರಸಭೆಯಲ್ಲಿ ಕಾರ್ಯ ನಿರ್ವವಹಿಸುತ್ತಿದ್ದ ದಿನಗೂಲಿ ಪೌರಕಾರ್ವಿುಕರಿಗೆ ಸೇವಾ ಭದ್ರತೆ ಒದಗಿಸಿ’ ಎಂದು ಮನವಿ ನೀಡಿದ ಹಿನ್ನೆಲೆಯಲ್ಲಿ ಕುಂಟು ನೆಪಗಳನ್ನು ಆಧಾರವಾಗಿಟ್ಟುಕೊಂಡು ಅವರನ್ನು ವಜಾ ಮಾಡಲಾಗಿತ್ತು. ಏಕಾಏಕಿ ವಜಾಗೊಳಿಸಿದ ಸಂದರ್ಭದಲ್ಲಿ ತಿಂಗಳೊಳಗಾಗಿ ಮರಳಿ ಕೆಲಸಕ್ಕೆ ಕರೆದುಕೊಳ್ಳುತ್ತೇವೆ ಎಂದು ಕಾರ್ವಿುಕರಿಗೆ ಭರವಸೆ ನೀಡಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ಪೌರ ಕಾರ್ವಿುಕರನ್ನು ಮರಳಿ ಕೆಲಸಕ್ಕೆ ತೆಗದುಕೊಂಡಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಪರಿಶೀಲಿಸಿ ಒಂದು ವಾರದೊಳಗೆ ಬಡ ಕಾರ್ವಿುಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಅಧ್ಯಕ್ಷ ರಂಗಪ್ಪ ಮೈಲಮ್ಮನವರ, ವಜಾಗೊಂಡ ಪೌರ ಕಾರ್ವಿುಕರಾದ ಹನುಮಂತಪ್ಪ ಕಾತರಕಿ, ಮಾರ್ತಾಂಡಪ್ಪ ಮೈಲೆಮ್ಮನವರ, ಮಹದೇವಪ್ಪ ಕೆಂಚಣ್ಣವರ, ಮೋಹನ ಲಕ್ಷೆ್ಮೕಶ್ವರ, ವಿನೋದ ಮರಗಣ್ಣನವರ, ಸದಾನಂದ ಮೈಲೆಮ್ಮನವರ, ಶಿವಕುಮಾರ ಕೆಂಚಣ್ಣವರ, ಉಮೇಶ ಹುಲ್ಲಮ್ಮನವರ, ರಮೇಶ ಸಿದ್ದಮ್ಮನವರ, ವಿರೂಪಾಕ್ಷಪ್ಪ ಕೆಂಚಣ್ಣವರ, ಕಿರಣ ಮೈಲೆಮ್ಮನವರ, ಮಂಜುನಾಥ ಲಕ್ಷೆ್ಮೕಶ್ವರ, ಆಕಾಶ ಬಿಸಿ, ದ್ಯಾಮಣ್ಣ ಕಟ್ಟಿ, ಮಂಜುನಾಥ ಮೈಲೆಮ್ಮನವರ, ಕಾಶಿನಾಥ ಪೂಜಾರ, ಗಣೇಶ ಮರಗಣ್ಣವರ, ಅನಿಲ ಬಿಸಿ, ಮುತ್ತಣ್ಣ ಲಕ್ಷೆ್ಮೕಶ್ವರ, ಮೈಲಾರಿ ಮರಗಪ್ಪನವರ, ಕೃಷ್ಣಪ್ಪ ಮೈಲೆಮ್ಮನವರ, ಇತರರು ಇದ್ದರು.