ಧಾರವಾಡ: ಹುಟ್ಟುಸಾವುಗಳಿಂದ ಮುಕ್ತರಾಗಬೇಕೆಂದರೆ ಸಾಕ್ಷಾತ್ಕಾರ ಸಂಪಾದಿಸಬೇಕು. ಭಕ್ತಗಣ ಗುರು ಸೇವೆಗೆ ತೆರೆದುಕೊಂಡಾಗಲೇ ಮುಕ್ತಿಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಭಕ್ತ ಸಮೂಹ ಹಮ್ಮಿಕೊಂಡಿದ್ದ 92ನೇ ವರ್ಧಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸನ್ಮಾರ್ಗದ ಬೋಧನೆಯೊಂದಿಗೆ ಆಧ್ಯಾತ್ಮದ ಮೇರು ಮಾರ್ಗವನ್ನು ತೋರುವಾತನೇ ಶ್ರೀಗುರು ಎಂದರು.
ಅತಿಥಿಯಾಗಿದ್ದ ಮೊರಬ ಜಡಿಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಅನುಷ್ಠಾನ ಮೂರ್ತಿಗಳಾಗಿರುವ ಶ್ರೀಶಾಂತಲಿಂಗ ಶಿವಾಚಾರ್ಯರು ಶಿವಯೋಗ ಸಾಧನೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಎಲ್ಲ ಕಿರಿಯ ಶಿವಾಚಾರ್ಯರಿಗೆ ಆದರ್ಶದ ಗುರುಪರಂಪರೆಯ ಮಾರ್ಗದರ್ಶಕರಾಗಿ ಉಪದೇಶ ಮಾಡಿದ್ದಾರೆ ಎಂದರು. ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು.
ತುಲಾಭಾರ ಸೇವೆ
ಶೋಭಾ ಯರಗಂಬಳಿಮಠ, ಪ್ರೇಮಾ ಶಿವಪ್ಪ ರುದ್ರಾಪೂರ, ಬಿ.ಸಿ.ಕೊಳ್ಳಿ, ಪವನಕುಮಾರ ಮಲ್ಲಿಕಾರ್ಜುನ ಕುಸುಗಲ್ಲ, ಸುನೀಲ ಗುಡಿ, ಬಸಪ್ಪ ಉಗರಗೋಳ, ವಿಜಯನಗರ ಜಿಲ್ಲೆ ಹೊಳಗುಂದಿಯ ಗುರುಬಸವರಾಜ ಮತ್ತೂರಮಠ, ಅಕ್ಕಮಹಾದೇವಿ ಯರಗಂಬಳಿಮಠ, ಎಸ್.ಎಂ. ಪ್ರಶಾಂತರಾಜಗುರು, ತಿಮ್ಮಾಪೂರ ಗ್ರಾಮದ ಮಾರುತಿ ದೇವಸ್ಥಾನ ಸದ್ಭಕ್ತ ಮಂಡಳಿ ವತಿಂದ ಸಕ್ಕರೆ, ಬೆಲ್ಲ, ಅಕ್ಕಿ, ತೆಂಗಿನಕಾಯಿ, ರವೆ ಮತ್ತು ನಾಣ್ಯಗಳ ಮೂಲಕ ಹಿರಿಯ ಶ್ರೀ ಶಾಂತಲಿಂಗ ಶಿವಾಚಾರ್ಯರಿಗೆ 9 ತುಲಾಭಾರಗಳು ಜರುಗಿದವು. ಗ್ರಾಮದೇವಿ ಸ್ಮರಣೆಯೊಂದಿಗೆ ಶೋಭಾ ಯರಗಂಬಳಿಮಠ ಅವರು 121 ಮುತ್ತೈದೆಯರಿಗೆ ಉಡಿ ತುಂಬಿದರು.
ಸುರೇಂದ್ರ ದೇಸಾಯಿ, ಎಂ.ಸಿ.ಹುಲ್ಲೂರ, ಉಮೇಶ ಶಿರಕೋಳ, ಅಪ್ಪಣ್ಣ ದೇಶಪಾಂಡೆ, ಮಲ್ಲಪ್ಪ ಕುಸುಗಲ್ಲ, ಶಿವಪ್ಪ ಹಂಚಿನಾಳ, ಬಸಣ್ಣ ಯಡಳ್ಳಿ, ಹಾರೋ ಬೆಳವಡಿಯ ರಾಮಣ್ಣ ಜಕ್ಕಣ್ಣವರ, ಶಾಂತಾದೇವಿ ಪುರಾಣಮಠ ಇದ್ದರು. ರುದ್ರಮ್ಮ ಬಸಯ್ಯ ಗುಡಿ ಅವರ ದಾಸೋಹ ಸೇವೆ ಜರುಗಿತು. ವಿನಾಯಕ ಹಿರೇಮಠ ನಿರೂಪಿಸಿದರು.