ಜಿಲ್ಲೆ

ವಾಸ್ತವ ದೂರ ಮಾಡಿದ ತಾಂತ್ರಿಕತೆ

ಪ್ರಶಾಂತ ಹೂಗಾರ

ಕೊಟ್ಟಲಗಿ: ಸಿದರಾಯಪ್ಪ ಮಹಾರಾಜರ ಸೇವಾ ನಿಷ್ಠೆ ಇಂದಿನ ಪೀಳಿಗೆಗೆ ದಾರಿದೀಪ ಎಂದು ಇಂಚಗೇರಿ ಮಠದ ಪೀಠಾಧಿಪತಿ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.

ಗ್ರಾಮದಲ್ಲಿ ಸಿದರಾಯಪ್ಪ ಮಹಾರಾಜರ 11ನೇ ಪುಣ್ಯಾರಾಧನೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಸಪ್ತಾಹ ಹಾಗೂ ಸರ್ವಧರ್ಮ ಭಾವೈಕ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ತಾಂತ್ರಿಕತೆಯ ಬಳಕೆ, ಸಾಮಾಜಿಕ ಮಾಧ್ಯಮ ಮತ್ತು ಇತರ ತಾಂತ್ರಿಕ ಸಾಧನಗಳು ನಮ್ಮನ್ನು ವಾಸ್ತವದಿಂದ ದೂರ ಮಾಡುತ್ತಿವೆ. ಇಂಚಗೇರಿ ಅಧ್ಯಾತ್ಮ ಪರಂಪರೆ ಜಾತ್ಯತೀತ ಸಮಾಜ ನಿರ್ಮಿಸಿ ಪ್ರತಿಯೊಬ್ಬರ ಆತ್ಮಕಲ್ಯಾಣ ಬಯಸಿದ ಸಂಪ್ರದಾಯ ಎಂದರು.

ಯಕ್ಕಂಚಿ ಗುರುದೇವ ತಪೋವನದ ಗುರುಪಾದ ಶ್ರೀಗಳು ಮಾತನಾಡಿದರು.

ಶಂಕರಪ್ಪ ಮಹಾರಾಜರು, ಭೀಮಣ್ಣ ಮಹಾರಾಜರು, ನಾಗಪ್ಪ ಜತ್ತಿ ಮಹಾರಾಜರು, ಪರಶುರಾಮ ಮಹಾರಾಜರು, ಶಶಿಕಾಂತ ಅಂಬಣ್ಣ ಮಹಾರಾಜರು, ಸದಾಶಿವ ಮಹಾರಾಜರು ಪ್ರವಚನ ನೀಡಿದರು.

ಹಿರಿಯರಾದ ಬಸಣ್ಣ ಮಾನಿಂಗಪ್ಪಗೋಳ, ಸಿದ್ದರಾಯ ಯಲ್ಲಡಗಿ, ಅಪ್ಪಾಸಾಹೇಬ ಬಿರಾದಾರ, ಸಿದ್ದಪ್ಪ, ಶಿವಾನಂದ ತೇಲಿ, ಸುರೇಶ ಖಡಕಿ, ಸಿದ್ದಲಿಂಗ ಝಳಕಿ, ಮಹಾದೇವ ಜತ್ತಿ, ಭಾವೂರಾಜ ಝಳಕಿ, ಶಿವಪ್ರಭು ಅಥಣಿ, ವಿನೋಬಾ ಇತರರಿದ್ದರು. ಡಾ.ರಾಮಣ್ಣ ದೊಡ್ಡನಿಂಗಪ್ಪಗೋಳ ನಿರೂಪಿಸಿದರು. ರಘುನಾಥ ದೊಡ್ಡನಿಂಗಪ್ಪಗೋಳ ವಂದಿಸಿದರು.