ಬೈಲಕುಪ್ಪೆ: ಕೊಪ್ಪ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಅವರ ಪತ್ನಿ ಸಮೀಪದ ದೊಡ್ಡಹೊನ್ನೂರು ಮುಖ್ಯ ರಸ್ತೆಯ ಜಮೀನಿನ ಪಕ್ಕದಲ್ಲಿದ್ದ ಹಳೇ ಮನೆಯೊಂದರಲ್ಲಿ ಬುಧವಾರ ಸಂಜೆ ನೇಣಿಗೆ ಶರಣಾಗಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಜಯಪ್ಪನ ಮಗ ಸುರೇಶ (40), ಪತ್ನಿ ಪಲ್ಲವಿ (28) ಆತ್ಮಹತ್ಯೆಗೆ ಶರಣಾದವರು.
ಸುರೇಶ್ ಕೆಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ಬರೆದಿಟ್ಟಿರುವ ಪತ್ರ ಬೈಲಕುಪ್ಪೆ ಪೊಲೀಸರಿಗೆ ಸಿಕ್ಕಿದೆ. ಪೊಲೀಸರ ತನಿಖೆಯಿಂದ ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಿದೆ. ಮೃತರ ಸಂಬಂಧಿ ರವಿ ಬೈಲಕುಪ್ಪೆ ಪೊಲೀಸ್ ಠಾಣೆಗೆ ದೂರು ಕೊಟ್ಟ ಮೇರೆಗೆ ಪಿಎಸ್‌ಐ ಅಜಯ್‌ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕುಶಾಲನಗರ ಸಾರ್ವಜನಿಕರ ಆಸ್ಪತ್ರೆ ಶವಾಗಾರರಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಎರಡೂ ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಉದ್ಯಮಿ ಸುರೇಶ್ ಮತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕಟಣಕ್ಕೆ ಸಂಬಂಧಿಸಿದವರನನು ಪೊಲೀಸರು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕುಶಾಲನಗರ ಸಾರ್ವಜನಿಕರ ಆಸ್ಪತ್ರೆಯ ಶವಾಗಾರದ ಮುಖ್ಯರಸ್ತೆ ಬಳಿ ಸಂಬಂಧಿಕರು ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಕೈಬಿಟ್ಟರು. ಮೃತರಿಗೆ ಪುತ್ರ, ಪುತ್ರಿ ಇದ್ದಾರೆ.