ಜಿಲ್ಲೆ

ಸಮಾಜಕ್ಕೆ ಶಕ್ತಿಯನ್ನಾಗಿಸುವುದೇ ನೈಜ ಶಿಕ್ಷಣ

Avinash R

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ತಾನು ಬದುಕುವ ಜೊತೆಗೆ ಇನ್ನೊಬ್ಬರ ಬದುಕಿಗೂ ಪ್ರಯತ್ನಿಸುವಂತಹ ಮಾನವೀಯ ಮೌಲ್ಯಗಳನ್ನು ಬೆಳೆಸುವ ತನ್ಮೂಲಕ ವ್ಯಕ್ತಿಯನ್ನು ಸಮಾಜಕ್ಕೆ ಶಕ್ತಿಯನ್ನಾಗಿಸುವ ಶಿಕ್ಷಣವೇ ನೈಜ ಶಿಕ್ಷಣವಾಗಿದ್ದು, ಅಂತಹ ಶಿಕ್ಷಣದ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಅವರು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅಜಯ್ ಅಮ್ಟಂಗೆ ಮಾತನಾಡಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಇಂದ್ರಪ್ರಸ್ಥ ವಿದ್ಯಾಲಯವು ಅವಕಾಶಗಳ ಹೆಬ್ಬಾಗಿಲಾಗಿದೆ ಎಂದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಅವರವರ ಹೆತ್ತವರ ಸಹಿತ ಸನ್ಮಾನದ ಗೌರವ ಸಲ್ಲಿಸಲಾಯಿತು.

ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಸುಬ್ರಹ್ಮಣ್ಯ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಸುಧಾ ರಾವ್, ಇಂದ್ರಪ್ರಸ್ಥ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್, ವಿದ್ಯಾಲಯದ ಮುಖ್ಯಶಿಕ್ಷಕಿ ವೀಣಾ ಪ್ರಸಾದ್, ವಿದ್ಯಾಲಯದ ವಿದ್ಯಾರ್ಥಿ ನಾಯಕ ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಭಾಗ್ಯಶ್ರೀ ಹಾಗೂ ನೇಹಾ ನಿರೂಪಿಸಿದರು. ಸಹರ್ಷ್ ಗೌಡ ಸ್ವಾಗತಿಸಿದರು, ವಿದ್ಯಾರ್ಥಿ ನಾಯಕ ನಿಹಾಲ್ ಶೆಟ್ಟಿ ವಂದಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್, ಶ್ರೀ ರಾಮ ಶಾಲಾಡಳಿತ ಮಂಡಳಿ ಅಧ್ಯಕ್ಷ ಸುನೀಲ್ ಅನಾವು, ಸಂಚಾಲಕ ಯು.ಜಿ.ರಾಧಾ, ಜಿಲ್ಲಾ ಗೋ ರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು, ಉದ್ಯಮಿ ಸುಂದರ ಗೌಡ, ಶಕಿಲಾ ಕುಂದರ್ ಮುಂಬೈ, ಮಹೇಶ್ ಕಿಣಿ, ಶಾಂತರಾಮ ಭಟ್ ಕಾಂಚನ ಮತ್ತಿತರರು ಭಾಗವಹಿಸಿದ್ದರು.