ಜಿಲ್ಲೆ

ಮಕ್ಕಳ ಸೃಜನಶೀಲತೆಯ ಏಳ್ಗೆಯೇ ನೈಜ ಶಿಕ್ಷಣ

ಇಂದಿರಾ ಎನ್ ಕೆ

ಕುಂದಾಪುರ: ಪಠ್ಯದ ಕಲಿಕೆ ಅಂದರೆ ಅದು ಬರೀ ನೀತಿ ಬೋಧಕ ವಾತ್ರವಲ್ಲ, ಬದಲಾಗಿ ಪ್ರಜಾಸತಾತ್ಮಕ ಜೀವಂತ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದಾಗಿದೆ. ವಿದ್ಯಾರ್ಥಿಗಳಲ್ಲಿ ಹುದುಗಿರುವ ಸೃಜನಶೀಲತೆ ಹೊರತರಲು ಅಧ್ಯಾಪಕರು ಪ್ರಯತ್ನಿಸುತ್ತಾರೆ ಎಂದು ಸಾಹಿತಿ, ಯಕ್ಷ ಕವಿ ಪಿ.ವಿ.ಆನಂದ ಸಾಲಿಗ್ರಾಮ ಕರೆ ನೀಡಿದರು.

ಕೋಟೇಶ್ವರ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ವಿಭಾಗದ ಎನ್‌ಎಸ್‌ಎಸ್ ಟಕ ಮತ್ತು ಕಾರಂತ ಸಾಹಿತ್ಯ ಸಂ ಆಶ್ರಯದಲ್ಲಿ ನಡೆದ ‘ಸವಿ ಕನ್ನಡ’ ಸಾಹಿತ್ಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆ ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂ ವಾರ್ಗದರ್ಶಿ ಶಿಕ್ಷಕಿ ನಾಗರತ್ನಾ, ಸಾಹಿತ್ಯ ಸಂ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ರವಾನಂದ ನಾಯಕ್ ಸ್ವಾಗತಿಸಿದರು. ವೈಷ್ಣವಿ ವಂದಿಸಿದರು. ಪಾವನಿ ಐತಾಳ ಹಾಗೂ ಪ್ರೀತಿಕಾ ನಿರೂಪಿಸಿದರು.