ತಿ.ನರಸೀಪುರ ತಾಲೂಕಿನ ಟಿ.ದೊಡ್ಡಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕೆನರಾ ಬ್ಯಾಂಕ್ ತಿ.ನರಸೀಪುರ ಶಾಖೆಯಿಂದ ಗ್ರಾಮೀಣ ಫೌಂಡೇಷನ್ ಆಫ್ ಕರ್ನಾಟಕ ಟ್ರಸ್ಟ್ ಸಹಭಾಗಿತ್ವದಲ್ಲಿ ಸಾಮಾಜಿಕ ಭದ್ರತಾ ಯೋಜನೆ ಶಿಬಿರವನ್ನು ಆಯೋಜಿಸಲಾಗಿತ್ತು. ಡಿ.ಎಂ.ರಾಜೇಶ್, ದಯಾನಂದ್, ಲೋಹಿತ್, ಎನ್.ಮರಿಸ್ವಾಮಿ ಇತರರು ಇದ್ದರು 
ಜಿಲ್ಲೆ

ಎಲ್ಲರಿಗೂ ಬ್ಯಾಂಕ್ ಸೇವೆ ನೀಡಲು ಸಿದ್ಧ

ಮಾದೇಶ್ ತಿ.ನರಸೀಪುರ

ತಿ.ನರಸೀಪುರ: ತಾಲೂಕಿನ ಟಿ.ದೊಡ್ಡಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕೆನರಾ ಬ್ಯಾಂಕ್ ತಿ.ನರಸೀಪುರ ಶಾಖೆಯಿಂದ ಗ್ರಾಮೀಣ ಫೌಂಡೇಷನ್ ಆಫ್ ಕರ್ನಾಟಕ ಟ್ರಸ್ಟ್ ಸಹಭಾಗಿತ್ವದಲ್ಲಿ ಸಾಮಾಜಿಕ ಭದ್ರತಾ ಯೋಜನೆ ಶಿಬಿರವನ್ನು ಆಯೋಜಿಸಲಾಗಿತ್ತು.

ಮೈಸೂರು ಪ್ರಾದೇಶಿಕ ಕಚೇರಿ ಡಿ.ಎಂ. ರಾಜೇಶ್ ಮಾತನಾಡಿ, ಬ್ಯಾಂಕ್‌ನ ಸೌಲಭ್ಯಗಳನ್ನು ಗ್ರಾಮದ ಎಲ್ಲ ವ್ಯಕ್ತಿಗಳೂ ಪಡೆಯಬೇಕು. ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕ್ ಸೇವೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಯಾನಂದ್ ಮಾತನಾಡಿ, ಎಲ್ಲರೂ ಸಾಲ ಸೌಲಭ್ಯಗಳನ್ನು ಬ್ಯಾಂಕ್‌ನಲ್ಲಿ ಪಡೆಯಲು ಸಲಹೆ ನೀಡಿದರು. ಆರ್ಥಿಕ ಸೇರ್ಪಡೆ ವಿಭಾಗದ ಲೋಹಿತ್ ಅವರು ಸಾಮಾಜಿಕ ಭದ್ರತಾ ಯೋಜನೆಗಳ ವಿವರಗಳನ್ನು ತಿಳಿಸಿದರು.

ಕೆನರಾ ಬ್ಯಾಂಕ್ ಫೀಲ್ಡ್ ಆಫಿಸರ್ ಭಾನುಪ್ರಕಾಶ್, ಗ್ರಾಮೀಣ ಫೌಂಡೇಷನ್ ಆಫ್ ಕರ್ನಾಟಕ ಟ್ರಸ್ಟ್‌ನ ಅಧ್ಯಕ್ಷ ಎನ್.ಮರಿಸ್ವಾಮಿ(ಕುಮಾರ್), ಸದಸ್ಯರಾದ ಸಿದ್ದರಾಜು, ಎಫ್‌ಎಲ್‌ಸಿ ವೇದಾವತಿ, ಬ್ಯಾಂಕ್ ಮಿತ್ರರಾದ ಮಲ್ಲಿಕಾ, ರಾಧಾ, ದೊಡ್ಡಪುರ, ದೊಡ್ಡನಹುಂಡಿ ಶಂಭುದೇವನಪುರ, ಮಾವಿನಹಳ್ಳಿ ಹಾಗೂ ತೊಟ್ಟವಾಡಿ ಗ್ರಾಮಸ್ಥರು ಇದ್ದರು.