*ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ಚನ್ನಪಟ್ಟಣ
ಉಪಚುನಾವನೆ ಟಿಕೆಟ್ ವಿಚಾರವಾಗಿ ದೆಹಲಿಯ ನಾಯಕರು ನಿರ್ಧಾರ ಮಾಡುತ್ತಾರೆ. ಕ್ಷೇತ್ರದ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪದ ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಲಿದೆ ಎಂದಿದ್ದ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ಯೋಗೇಶ್ವರ್ ಅವರ ಹೇಳಿಕೆಯನ್ನು ನಾನು ಗ್ರಹಿಸಿದ್ದೇನೆ. ಜೆಡಿಎಸ್ - ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಾನು ನಮ್ಮ ಪಕ್ಷದ ಬೆಂಬಲಿಗರ ವಿಶ್ವಾಸ ಪಡೆಯುತ್ತಿದ್ದೇನೆ ಎಂದು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಸುಗಮವಾಗಿ ಬಗೆ ಹರಿಯುತ್ತದೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಾಗಮಂಗಲ ಘಟನೆಯೇ ಸಾಕ್ಷಿ. ಒಂದು ಸಮುದಾಯವನ್ನು ಓಲೈಸಲು ಇನ್ನೊಂದು ಸಮುದಾಯಕ್ಕೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಸಚಿವ ಚಲುವರಾಯ ಸ್ವಾಮಿ ಅವರನ್ನು ಪ್ರಶ್ನಿಸಿದರು.
ವರ್ಷಕ್ಕೊಮ್ಮೆ ಬರುವ ಗಣೇಶೋತ್ಸವವನ್ನು ಒಂದು ತಿಂಗಳವರೆಗೂ ಆರಿಸುತ್ತೇವೆ. ಮುಸ್ಲಿಂ ಸಮುದಾಯದವರು ದಿನಕ್ಕೆ 5 ಬಾರಿ ನಮಾಜ್ ಕೂಗುತ್ತಾರೆ. ನಾವು ಅದನ್ನು ಗೌರವಿಸುತ್ತೇವೆ. ಆದರೆ, ಹಿಂದು - ಮುಸ್ಲಿಂ ಸಾಮರಸ್ಯ ಕದಡುತ್ತಿರುವುದು ಕಾಂಗ್ರೆಸ್ನವರು ಎಂದು ಆರೋಪಿಸಿದರು.
ಶಾಸಕ ಮುನಿರತ್ನ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಆಡಿಯೋದಲ್ಲಿರುವುದು ಅವರ ಧ್ವನಿನಾ ? ಅಲ್ಲವಾ ಎಂಬುದು ಎಫ್ ಎಸ್ಎಲ್ ವರದಿ ಬರಬೇಕಿದೆ. ಹಾಗಾಗಿ, ನಾವು ಈ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ. ಆದರೆ, ಈ ನೆಲದ ಕಾನೂನಿನ ಮುಂದೆ ಎಲ್ಲರೂ ಒಂದೇ. ಎಷ್ಟೇ ಪ್ರಭಾವಿ ಆಗಿದ್ದರೂ ಕಾನೂನು ಎಲ್ಲರಿಗೂ ಒಂದೇ ಎಂದರು.
ಕ್ಷೇತ್ರ ಪ್ರವಾಸ
ತಾಲೂಕಿನ ಅಕ್ಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಕ್ಕೂರು, ಬಾಣಗಹಳ್ಳಿ, ಸೋಗಾಲ ಗ್ರಾಪಂ ವ್ಯಾಪ್ತಿಯ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿ ಪ ಸಂಟನೆ ಮತ್ತು ಪ ಬಲವರ್ಧನೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಚರ್ಚಿಸಿದರು. ಮುಂಬರುವ ಉಪಚುನಾವಣೆಗೆ ಸಜ್ಜಾಗುವಂತೆ ಮುಖಂಡರನ್ನು ಹುರಿದುಂಬಿಸಿದರು.
ಪದ ತಾಲೂಕು ಅಧ್ಯ ಎಚ್.ಸಿ. ಜಯಮುತ್ತು, ನಗರಾಧ್ಯ ಅಜಯ್ ಕುಮಾರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುರುದೊಡ್ಡಿ ಜಯರಾಂ, ಮುಖಂಡರಾದ ಗರಕಹಳ್ಳಿ ಕೃಷ್ಣೇಗೌಡ, ಪ್ರಧಾನ್ ರಾಜಣ್ಣ, ಯಾಲಕ್ಕಿಗೌಡ, ಡಿಎಂಕೆ ಕುಮಾರ್, ರೇಖಾ ಉಮಾಶಂಕರ್ ಹಲವರು ಇದ್ದರು.