ಜಿಲ್ಲೆ

ಬಾಲ್ಯದಲ್ಲೇ ಚುನಾವಣೆ ಮಹತ್ವದ ಅರಿವು

ಇಂದಿರಾ ಎನ್ ಕೆ

ಹೆಬ್ರಿ: ಸುಭದ್ರ ಸರ್ಕಾರ ರಚನೆಯಾದರೆ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಸಾಧ್ಯ. ಗುಪ್ತ ಮತದಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗಳನ್ನು ಮಕ್ಕಳು ಬಾಲ್ಯದಲ್ಲಿಯೇ ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಇದು ಸಹಕಾರಿ ಎಂದು ಮುದ್ರಾಡಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.

ಮುದ್ರಾಡಿಯ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ನೇತಾಜಿ ಮತದಾರರ ಸಾಕ್ಷರತ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ಶಾಲಾ ಸಂಸತ್ತು ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಮಾತನಾಡಿದರು.

ಶಾಲಾ ಮುಖ್ಯಮಂತ್ರಿಯಾಗಿ ಕಾರ್ತಿಕ್, ಉಪಮುಖ್ಯಮಂತ್ರಿಯಾಗಿ ಪ್ರತೀಕ್ ಆಯ್ಕೆಯಾದರು. ಶಿಕ್ಷಕರಾದ ಪಿ.ವಿ.ಆನಂದ, ಶ್ಯಾಮಲಾ ಕೊಠಾರಿ, ಚಂದ್ರಕಾಂತಿ ಹೆಗ್ಡೆ, ಮಹೇಶ್ ನಾಯ್ಕ ಕೆ, ರಘುಪತಿ ಹೆಬ್ಬಾರ್, ವಿದ್ಯಾರ್ಥಿ ಯಕ್ಷಿತ್, ನೇತೃತ್ವದಲ್ಲಿ ಚುನಾವಣೆ ನಡೆಯಿತು.