ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ತಂತ್ರಜ್ಞಾನದ ವ್ಯಾಪಕ ವಿಸ್ತರಣೆಯಿಂದ ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಅಭ್ಯಾಸ ಕುಸಿದಿದೆ ಎಂದು ವಾಸ್ತುಶಿಲ್ಪಿ ಸುಹಾಸಿನಿ ಹಾನಗಲ್ ಹೇಳಿದರು.
ನಗರದ ಕೆಎಲ್ಇ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ (ಸಿಬಿಎ)ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಓದುವ ಹವ್ಯಾಸದ ಮಹತ್ವ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಆರೋಗ್ಯಕರವಾದ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ವಿವಿಧ ಪ್ರಕಾರಗಳ ಪುಸ್ತಕಗಳನ್ನು ಓದಬೇಕು ಎಂದರು.
ವಿಭಿನ್ನ ವ್ಯಕ್ತಿತ್ವದ ಹಾಗೂ ಓದಲು ಆದ್ಯತೆಯ ಪುಸ್ತಕಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಈ ವಿಚಾರ ಸಂಕಿರಣವು ವಿದ್ಯಾರ್ಥಿಗಳು ಪುಸ್ತಕಗಳ ಓದಿನತ್ತ ಮರಳಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಪ್ರೊ. ಸಾನಿಯಾ ಹೆರೂರ ಇದ್ದರು.