ಜಿಲ್ಲೆ

ಜಾನಪದ ಆಚರಣೆಯಿಂದ ಬದುಕು ಶ್ರೀಮಂತ : ಸುರೇಶ್ ಕುಮಾರ್ ಬಿ. ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ತುಳುವಿನ ಜಾನಪದ ನಂಬಿಕೆ, ಧಾರ್ಮಿಕ ಆಚರಣೆಗಳು, ಕೃಷಿ ಸಂಸ್ಕೃತಿಗಳ ಬದುಕು ಶ್ರೀಮಂತವಾಗಿದ್ದು ಮಂದಾರ ಕೇಶವ ಭಟ್ಟರ ಮಂದಾರ ರಾಮಾಯಣ ತುಳು ಸಂಸ್ಕೃತಿಯನ್ನು ಹಿಡಿದಿಟ್ಟಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ.ನಾವೂರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಮಂದಾರ ರಾಮಾಯಣ: ಮಿತ್ತ ಲೋಕದ ಬಿತ್ತ್ ಎಂಬ ವಿಷಯದಲ್ಲಿ ನಡೆದ ವಾಚನ ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ.ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ ಮುಖ್ಯ ಅತಿಥಿಯಾಗಿದ್ದರು. ನಿವೃತ್ತ ಪ್ರಾಂಶುಪಾಲ ಸುಭಾಶ್ಚಂದ್ರ ಕಣ್ವತೀರ್ಥ ಕಾವ್ಯ ವಾಚನ ಮಾಡಿದರು. ಉಪನ್ಯಾಸಕಿ ಸಂಧ್ಯಾ ಆಳ್ವ ವ್ಯಾಖ್ಯಾನ ಮಾಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕ ಡಾ.ಮಾಧವ ಎಂ.ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ವಂದಿಸಿದರು. ತುಳುಪೀಠದ ಪ್ರಸಾದ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

ರಾಮಾಯಣ, ಮಹಾಭಾರತ ಭಾರತದ ಜನಜೀವನವನ್ನು ಆವರಿಸಿದ ಮಹಾಕಾವ್ಯಗಳು. ಸತ್ಯ ಮತ್ತು ಕಲ್ಪನೆಗಳ ಸುಂದರ ಹೆಣಿಗೆಯಾದ ಈ ಕಾವ್ಯಗಳು ದೇಸಿ ಭಾಷೆಗಳಲ್ಲಿ ಮರುಹುಟ್ಟು ಪಡೆದಿವೆ. ಮಂದಾರ ರಾಮಾಯಣದಲ್ಲಿ ತುಳು ಸಂಸ್ಕೃತಿ ಪ್ರಕಟವಾಗಿದೆ. ಪ್ರೊ.ಸೋಮಣ್ಣ ಅಧ್ಯಕ್ಷ, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ