ಜಿಲ್ಲೆ

ಓದುಗರ ಪತ್ರ; ಭಾರತೀಯ ಸೇನೆಯ ಬಗ್ಗೆ ಅಗೌರವದ ಹೇಳಿಕೆ ಬೇಡ

ಮಂಜುನಾಥ ಅಂಗಡಿ

ಧಾರವಾಡ: ಪಹಲ್ಗಾಮ್‌ನಲ್ಲಿ ನಡೆದ ನಾಗರಿಕರ ಹತ್ಯೆಗೆ ಪ್ರತಿಯಾಗಿ ಭಾರತೀಯ ಯೋಧರು ಆಪರೇಷನ್ ಸಿಂಧೂರ ಹೆಸರಿನಲ್ಲಿ ಪ್ರತಿ ದಾಳಿ ನಡೆಸಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಆದರೆ, ಈ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಬಾಯಿಗೆ ಬಂದAತೆ ಮಾತನಾಡುತ್ತಿದ್ದಾರೆ. ರಾಜಕಾರಣಿಗಳು ತಮ್ಮ ಪಕ್ಷಗಳನ್ನು ಓಲೈಸಲಿ. ಆದರೆ, ಓಲೈಸುವ ಭರದಲ್ಲಿ ನಮ್ಮ ಸೈನಿಕರಿಗೆ ಅವಮಾನ ಮಾಡಿದರೆ ಅವರನ್ನು ಜನರು ಕ್ಷಮಿಸುವುದಿಲ್ಲ. ಇನ್ನಾದರೂ ರಾಜಕಾರಣಿಗಳು ರಾಜಕಾರಣ ಬಿಟ್ಟು ದೇಶದ ಹಿತದ ಬಗ್ಗೆ ಯೋಚಿಸಬೇಕು. ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡು ಇರಬೇಕು.

- ಸುಭಾಸ ಪಾಟೀಲ, ಅಧ್ಯಕ್ಷರು, ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘ