ದೊಡ್ಡಬಳ್ಳಾಪುರ: ಓದುಗರಿಗಾಗಿ ರಾಜ್ಯದ ‘ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ’ 2024ರ ಆಗಸ್ಟ್ 2ರಿಂದ ನವೆಂಬರ್ 14ರವರೆಗೆ ಹಮ್ಮಿಕೊಂಡಿದ್ದ ’ವಿಜಯವಾಣಿ ಓದಿ, ಕಾರು ಗೆಲ್ಲಿ’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಿಸಲಾಯಿತು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧೆ ವಿಜೇತರಿಗೆ ವಿಜಯವಾಣಿ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿದ್ಯಾಧರ ಪಿ.ಪೂಜಾರ್ ಬಹುಮಾನ ವಿತರಿಸಿದರು.
ಬೆಂಗಳೂರಿನ ವಿಜಯವಾಣಿ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಕ್ಕಿ ಡ್ರಾ ಸಮಾರಂಭದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, ನಟ ಪ್ರಮೋದ್, ಮಂಜು 374 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದ್ದರು. ಈ ಪೈಕಿ ತಾಲೂಕಿನ 7 ವಿಜೇತರಿಗೆ ಬಹುಮಾನ ವಿತರಿಸಿ ಶುಭ ಕೋರಲಾಯಿತು.
ಇದೇ ವೇಳೆ ಕೆಲ ಅದೃಷ್ಟಶಾಲಿಗಳು ವಿಜಯವಾಣಿಯ ಸಾಮಾಜಿಕ ಕಳಕಳಿಯ ಸುದ್ದಿಗಳು, ಚಟುವಟಿಕೆ, ಸ್ಪರ್ಧೆಗಳ ಬಗ್ಗೆ ಸದಭಿಪ್ರಾಯ ಹಂಚಿಕೊಂಡರು. ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿದ್ಯಾಧರ ಪಿ.ಪೂಜಾರ್ ಮಾತನಾಡಿ, ವಿಜಯವಾಣಿ ಹೊಸತನವನ್ನು ಹೊತ್ತು ಪ್ರತಿ ದಿನ ಓದುಗರ ಮನೆ ಬಾಗಿಲಿಗೆ ಬರುತ್ತಿದೆ. ರಾಜ್ಯದ ಓದುಗರು ನಮ್ಮ ಶ್ರಮಕ್ಕೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.
ಮುಖ್ಯ ಪತ್ರಿಕೆಯೊಂದಿಗೆ ವಿಜಯವಾಣಿ ಮಕ್ಕಳ ಓದು ಮತ್ತು ಅವರ ಭವಿಷ್ಯಕ್ಕೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ‘ವಿದ್ಯಾರ್ಥಿ ಉದ್ಯೋಗ ಮಿತ್ರ’ ಸಂಚಿಕೆಯನ್ನೂ ಅತಿ ಕಡಿಮೆ ಬೆಲೆಗೆ ನೀಡುತ್ತಿದೆ. ಇದು ನಿಜಕ್ಕೂ ವಿದ್ಯಾರ್ಥಿಗಳ ಪಾಲಿಗೆ ಬಹುಉಪಯುಕ್ತವಾಗಿದ್ದು, ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಮಿತ್ರವನ್ನು ವಿದ್ಯಾರ್ಥಿಗಳಿಗೆ ಓದಲು ಕೊಡಬೇಕು. ಇದರಿಂದ ಸ್ಪಷ್ಟ ಉಚ್ಛಾರಣೆ, ಅಕ್ಷರ ಜ್ಞಾನ, ಪ್ರಚಲಿತ ವಿದ್ಯಮಾನಗಳ ಗ್ರಹಿಕಾ ಸಾಮರ್ಥ್ಯ ಹೆಚ್ಚಳ ಸೇರಿ ವಿವಿಧ ಅನುಕೂಲಗಳಿವೆ ಎಂದರು.
ವಿದ್ಯಾರ್ಥಿ ಉದ್ಯೋಗ ಮಿತ್ರ ಓದುವಿಕೆಯಿಂದಾಗಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಜ್ಞಾನ ವೃದ್ಧಿಸಲಿದೆ. ಪಾಲಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿ ಮಿತ್ರದಲ್ಲಿ
ಬರುವ ಅಂಶಗಳನ್ನು ಹೇಳಿಕೊಟ್ಟರೆ ಕಲಿಕೆ ಸುಲಭವಾಗುತ್ತದೆ ಎಂದರು. ಪ್ರಸರಣ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಮುನಿಸ್ವಾಮಿರೆಡ್ಡಿ ಮಾತನಾಡಿ, ವಿಜಯವಾಣಿ ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸದಾ ಓದುಗರೊಂದಿಗೆ ಒಡನಾಟ ಇಟ್ಟುಕೊಂಡಿದೆ.
‘ನಾರಿ ನಿನಗೊಂದು ಸ್ಯಾರಿ’, ‘ನವರಾತ್ರಿ
ನವೋಲ್ಲಾಸ’, ಪದಬಂಧ, ಪ್ರಬಂಧ ಸ್ಪರ್ಧೆ ಸೇರಿ ಹಲವಾರು ಚಟುವಟಿಕೆ ಹಮ್ಮಿಕೊಂಡು ಓದುಗರನ್ನು ಸದಾಕಾಲ ಕ್ರಿಯಾಶೀಲವಾಗಿ ಇಡುವ ಕೆಲಸ ಮಾಡುತ್ತಿದೆ. ಅಲ್ಲದೆ,
ಇದೇ ಮೊದಲ ಬಾರಿಗೆ ಓದುಗರಿಗೆ ನೇರವಾಗಿ
ಬಹುಮಾನ ನೀಡಬಹುದಾದಂತಹ ಕಾರ್ಯಕ್ರಮ ಹಮ್ಮಿಕೊಂಡ ಕೀರ್ತಿ ವಿಜಯವಾಣಿಗೆ ಸಲ್ಲುತ್ತದೆ. ದಿನಪತ್ರಿಕೆಯನ್ನು ಓದಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲಕ್ಕಿ ಡ್ರಾನಲ್ಲಿ ಕಾರು, ದ್ವಿಚಕ್ರ ವಾಹನ ಸೇರಿ ವಿವಿಧ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ. ಇದು ಕ್ರಿಯಾಶೀಲ ಓದುಗರಲ್ಲಿನ ಉತ್ಸಾಹಕ್ಕೆ ನಿದರ್ಶನ ಎಂದು ತಿಳಿಸಿದರು. ಕಳೆದ ಹಲವಾರು ವರ್ಷಗಳಿಂದಲೂ ನಮ್ಮ ಮನೆಯಲ್ಲಿ ಎಲ್ಲರೂ ವಿಜಯವಾಣಿ ಓದುತ್ತೇವೆ. ವಿಭಿನ್ನ ಸ್ಪರ್ಧೆಗಳನ್ನು ವಿಜಯವಾಣಿ ಆಯೋಜಿಸುತ್ತಲೇ ಬಂದಿದೆ. ನಾನು ಓದಿ ಸಾಕಷ್ಟು ವಿಷಯ ತಿಳಿಯಲು ವಿಜಯವಾಣಿ ಮತ್ತು ವಿದ್ಯಾರ್ಥಿ ಮಿತ್ರ ನೆರವಾಗಿದೆ. ಹಾಗಾಗಿ ವಿಜಯವಾಣಿಗೆ ಧನ್ಯವಾದಗಳು. ಪುಟ್ಟರಾಜು ವಿಜಯವಾಣಿ ಓದುಗ ದೊಡ್ಡಬಳ್ಳಾಪುರ ವಿಜಯವಾಣಿ ಪತ್ರಿಕೆ ನನ್ನ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ವಿಜಯವಾಣಿ ಓದಿ ಕಾರು ಗೆಲ್ಲಿ ಕಾರ್ಯಕ್ರಮದ ದಿನಗಳಲ್ಲಿ ಒಂದೂ ದಿನವೂ ಬಿಡದೆ ಪತ್ರಿಕೆ ಓದಿದೆ. ಈ ಸಮಯದಲ್ಲಿ ಅನಾರೋಗ್ಯದ ಕಾರಣ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುವಾಗಲೂ ಪತ್ರಿಕೆ ತರಿಸಿ ಓದಿದ್ದೇನೆ. ಟ್ಯೂಷನ್ ಮಾಡುವವರಿಗೂ ವಿದ್ಯಾರ್ಥಿಗಳಿಗೆ ವಿಜಯವಾಣಿ ಓದಲು ಪ್ರೇರೇಪಿಸುವಂತೆ ಹೇಳಿದ್ದೇನೆ. ಜ್ಯೋತಿ ಬಹುಮಾನ ವಿಜೇತ