ಜಿಲ್ಲೆ

ಎನ್‌ಆರ್‌ಐಜಿ ಕಾಯ್ದೆ ಪುಸ್ತಕ ಓದಿಕೊಂಡು ಸಭೆಗೆ ಬನ್ನಿ

ಶೃಂಗೇರಿ: 15ನೇ ಹಣಕಾಸು ಮತ್ತು ನರೇಗಾ ಯೋಜನೆ ಮೊದಲ ಸುತ್ತಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಗೆ ಬರುವಾಗ ಸಂಬಂಧಪಟ್ಟ ಅಧಿಕಾರಿಗಳು ಎನ್‌ಆರ್‌ಐಜಿ ಕಾಯ್ದೆ ಪುಸ್ತಕವನ್ನು ಸರಿಯಾಗಿ ಓದಿಕೊಂಡು ಬರಬೇಕು. ಸಭೆಯಲ್ಲಿ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಲೆಕ್ಕ ಪರಿಶೋಧನಾ ತಾಂತ್ರಿಕ ಸಲಹೆಗಾರರಾದ ರೇಷ್ಮಾ ತಿಳಿಸಿದರು.

ಮೆಣಸೆ ಗ್ರಾಪಂ ಸಭಾಂಗಣದಲ್ಲಿ 15ನೇ ಹಣಕಾಸು ಮತ್ತು ನರೇಗಾ ಯೋಜನೆಯ ಮೊದಲ ಸುತ್ತಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ನಾವು ಕಾಮಗಾರಿಗಳನ್ನು ಕೂಲಂಕಷವಾಗಿ ಪರಿಶೀಲಿಸದ ಬಳಿಕ ಸಾರ್ವಜನಿಕರ ಒಪ್ಪಿಗೆ ಪಡೆಯಬೇಕಾಗುತ್ತದೆ. 2020ನೇ ಸಾಲಿನ 19 ಕಾಮಗಾರಿಗಳ ಕುರಿತು ಜಿಪಂ ಇಂಜಿನಿಯರ್ ನಮಗೆ ಮಾಹಿತಿ ನೀಡಿಲ್ಲ. ಹಾಗಾಗಿ ಲೆಕ್ಕಪರಿಶೋಧನಾ ಇಲಾಖೆ ಕಾಮಗಾರಿಗಳನ್ನು ವಿಲೇ ಇಡಲಾಗಿದೆ ಎಂದರು.

ಮೆಣಸೆ ಗ್ರಾ.ಪಂನ 2023-24ನೇ ಸಾಲಿನ 15ನೇ ಹಣಕಾಸುಯೋಜನೆಯ ಖರ್ಚು-ವೆಚ್ಚವನ್ನು ಸಭೆಯಲ್ಲಿ ಮಂಡಿಸಲಾಯಿತು. ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಸದಸ್ಯರಾದ ಅಜಿತ್‌ಶೆಟ್ಟಿ, ಶಾಮಣ್ಣ, ಪಿಡಿಒ ನಾಗಭೂಷಣ್, ಅಕ್ಷರ ದಾಸೋಹ ಸಂಯೋಜಕಿ ಶಾರದಾ ಉಪಸ್ಥಿತರಿದ್ದರು.