ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಶಿಣ ಸಂಸ್ಥೆಯಲ್ಲಿ ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗ ಮಿತ್ರ ಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ಪಿಡಿಒ ಸಿ.ಜಿ. ಪಾರೆ, ರಮೇಶಗೌಡ ಬಿರಾದಾರ, ಚಂದ್ರಕಾಂತ ದಶವಂತ ಇತರರಿದ್ದರು. 
ಜಿಲ್ಲೆ

ಪ್ರತಿ ದಿನವೂ ವಿದ್ಯಾರ್ಥಿ ಉದ್ಯೋಗ ಮಿತ್ರ ಓದಿ

ಇಂಡಿ: ಎಸ್​ಎಸ್​ಎಲ್​ಸಿ ಹಾಗೂ ದ್ವೀತಿಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ಪ್ರತಿದಿನವೂ ಅಭ್ಯಾಸ ಮಾಡುವ ಮೂಲಕ ಗುರಿ ಸಾಧಿಸಬೇಕು ಎಂದು ಚವಡಿಹಾಳ ಗ್ರಾಪಂ ಪಿಡಿಒ ಸಿ.ಜಿ. ಪಾರೆ ಹೇಳಿದರು.

ತಾಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಶಿಣ ಸಂಸ್ಥೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಯನ್ನು ಮಕ್ಕಳಿಗಾಗಿ ಕೇವಲ ದಿನಕ್ಕೆ ಒಂದು ರೂಪಾಯಿ ದರದಲ್ಲಿ ಸಿಗುವಂತೆ ವಿಜಯವಾಣಿ ಪತ್ರಿಕೆ ಮಾಲೀಕರಾದ ಸಂಕೇಶ್ವರ ಅವರು ಮಾಡಿದ್ದಾರೆ. ಅವರು ಯಶಸ್ವಿ ಉದ್ಯಮಿಯಾಗಿದ್ದು ವಿಆರ್​ಎಲ್​ ಸಮೂಹ ಸಂಸ್ಥೆಗಳ ಮುಖಾಂತರ ಸಾಕಷ್ಟು ಜನೋಪಯೋಗಿ ಕಾರ್ಯ ಮಾಡುತ್ತಿದ್ದಾರೆ ಎಂದರು.

ಗ್ರಾಪಂ ಅಧ್ಯ ರಮೇಶಗೌಡ ಬಿರಾದಾರ ಅವರು ವಿದ್ಯಾರ್ಥಿ ಉದ್ಯೋಗ ಮಿತ್ರದ ವೆಚ್ಚವನ್ನು ಪಂಚಾಯಿತಿ ಮುಖಾಂತರವೇ ಭರಿಸೋಣ ಎಂದು ತಿಳಿಸಿದ್ದು ನಾವು ಪತ್ರಿಕೆಯನ್ನು ತಮಗೆ ಮುಟ್ಟಿಸುವ ಕಾರ್ಯ ಮಾಡುತ್ತೇವೆ. ವಿದ್ಯಾರ್ಥಿಗಳು ಪ್ರತಿದಿನ ಅವುಗಳನ್ನು ಓದುವ ಮೂಲಕ ನಿಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದರು.

ಶಿಕ ಚಂದ್ರಕಾಂತ ದಶವಂತ ಮಾತನಾಡಿದರು. ಪತ್ರಕರ್ತ ಉಮೇಶ ಬಳಬಟ್ಟಿ ಮಾತನಾಡಿ, ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಉದ್ಯೋಗ ಮಿತ್ರ ಪ್ರತಿಗಳನ್ನು ಪಂಚಾಯಿತಿ ಮುಖಾಂತರ ಖರೀದಿಸಿ ಮಕ್ಕಳಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿರುವುದು ಸ್ಮರಣೀಯ ಎಂದರು.

ಗ್ರಾಮದ ಯುವ ಮುಖಂಡ ಸಂಜೀವಕುಮಾರ ದಶವಂತ ಮಾತನಾಡಿ, ವಿಜಯವಾಣಿ ಪತ್ರಿಕೆ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಮಾಹಿತಿ ನೀಡುತ್ತಿದ್ದು ಪತ್ರಿಕೆಯ ಪತ್ರಕರ್ತರು ಭಾಗ್ಯವಂತಿ ಶಾಲೆಯ ಮೇಲೆ ಹೆಚ್ಚಿನ ಕಾಳಜಿ ವಹಿಸಿದ ಪ್ರಯುಕ್ತ ಎಲ್ಲ ಮಕ್ಕಳಿಗೂ ಉಚಿತ ಉದ್ಯೋಗ ಮಿತ್ರ ದೊರೆಯುವಂತಾಯಿತು ಎಂದರು.

ವಿದ್ಯಾರ್ಥಿಗಳಾದ ಅಭಿಷೇಕ ಬಿರಾದಾರ, ಶ್ವೇತಾ ಬಿರಾದಾರ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಉದ್ಯೋಗ ಮಿತ್ರದಿಂದ ಆಗುವ ಲಾಭದ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಎಸ್​.ಐ. ಕಾರಬಾರಿ, ಶಿವಾನಂದ ದಶವಂತ, ಎಸ್​.ಐ.ಹಿರೇಮಠ, ಬಸವರಾಜ ರೋಡಗಿ, ಪ್ರಕಾಶ ಹಲಸಂಗಿ, ಸುನೀಲಕುಮಾರ ಜತ್ತಿ, ಎಚ್​.ಆರ್​. ಪೂಜಾರಿ ಸೇರಿ ಶಿಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.