ಚಿಮ್ಮಡ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 8ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗ್ರಾಪಂ ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ ಉದ್ಘಾಟಿಸಿದರು. ಬಿ.ಎಂ. ಹಳಮನಿ, ಪ್ರಭು ದೇವಗೋಳ, ಬಂಗಾರೆವ್ವ ಜಾಲಿಕಟ್ಟಿ, ಪದ್ಮಾವತಿ ಭಜಂತ್ರಿ, ಮೇಘಾ ಗಾಣಿಗೇರ, ಬಾಳಪ್ಪ ಗಡೆಪ್ಪನವರ ಮತ್ತಿತರರಿದ್ದಾರೆ.  
ಜಿಲ್ಲೆ

ಸಂಸ್ಕಾರಯುಕ್ತ ಶಿಕ್ಷಣದಿಂದ ಗುರಿ ತಲುಪಿ

ಚಿಮ್ಮಡ: ಸಂಸ್ಕಾರಯುಕ್ತ ಶಿಕ್ಷಣ ವಿದ್ಯಾರ್ಥಿಗಳನ್ನು ಗುರಿ ತಲುಪಿಸುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಶಿಕ್ಷಣ ಸಂಯೋಜಕ ಬಿ.ಎಂ. ಹಳಮನಿ ಹೇಳಿದರು.

ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಕವಿ ಚಕ್ರವರ್ತಿ ರನ್ನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಕಲಿಕೆಯ ಜತೆಗೆ ನೈತಿಕ ಶಿಕ್ಷಣ ನೀಡಬೇಕು. ಸರ್ಕಾರ ಹೆಣ್ಣು ಮಕ್ಕಳ ಕಲಿಕೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಭಾಗಗಳಲ್ಲಿಯೂ ಪದವಿ ಪಡೆಯುವ ಶೈಕ್ಷಣಿಕ ವಾತಾವರಣ ಸೃಷ್ಟಿಸಲಾಗಿದ್ದು, ಹೆಣ್ಣುಮಕ್ಕಳು ಯಾವ ಕಾರಣಕ್ಕೂ ಶಿಕ್ಷಣ ಮೊಟಕುಗೊಳಿಸಬಾರದು ಎಂದರು.

ಯುವ ಮುಖಂಡ ಪ್ರವೀಣ ಪೂಜಾರಿ ಮಾತನಾಡಿ, ಹೆಣ್ಣು ಮನಸ್ಸು ಮಾಡಿದರೆ ಸಾಧಿಸಬಲ್ಲಳು ಎಂಬುದಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಇಂದಿರಾ ಗಾಂಧಿ, ಸಾವಿತ್ರಿಬಾಯಿ ಫುಲೆ ಅಂತಹ ನೂರಾರು ಸಾಧಕರ ಇತಿಹಾಸವಿದ್ದು, ಅವರ ಕುರಿತು ಅಧ್ಯಯನ ಮಾಡುವ ಮೂಲಕ ದೇಶಕ್ಕೆ, ಗ್ರಾಮಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದರು.

ಸಿಆರ್‌ಪಿ ಸಮನ್ವಯ ಅಧಿಕಾರಿ ದಾಕ್ಷಾಯಿಣಿ ಮಂಡಿ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎಂ.ಎಸ್. ಜಿಟ್ಟಿ, ಶಿಕ್ಷಕ ಡಿ.ಪಿ. ಪರೀಟ, ಶಾಲೆ ಶಿಕ್ಷಕ ಎಸ್.ಎ. ಬಿರಾದಾರ ಮಾತನಾಡಿದರು.

ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ಇಂಗ್ಲಿಷ್ ನಾಟಕ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು.

ಎಸ್‌ಡಿಎಂಸಿ ಅಧ್ಯಕ್ಷ ಪ್ರಭು ದೇವಗೋಳ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಪದ್ಮಾವತಿ ಭಜಂತ್ರಿ, ಗ್ರಾಪಂ ಸದಸ್ಯೆ ಮೇಘಾ ಗಾಣಿಗೇರ, ಬಾಳಪ್ಪ ಗಡೆಪ್ಪನವರ, ಅನ್ನಪೂರ್ಣ ಅಥಣಿ, ಶ್ರೀಶೈಲ ಮಠಪತಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಪೀರಸಾಬ ನದಾ, ಅಶೋಕ ಚಿಮ್ಮಡ, ಇಮಾಮ ಯಾದವಾಡ, ಹನುಮಂತ ಭಜಂತ್ರಿ ಮತ್ತಿತರರಿದ್ದರು. ಶಿಕ್ಷಕ ಎಸ್.ವೈ. ಬಂಗಾರಿ ಸ್ವಾಗತಿಸಿದರು. ಲಕ್ಷ್ಮೀ ಕರಡಿ ನಿರೂಪಿಸಿದರು. ಜೆ.ಎಸ್. ಗಡೆನ್ನವರ ವಂದಿಸಿದರು.