ಹೆಚ್ಚುವರಿ ಭೂಮಿ ಪ್ರಕರಣಗಳ ಮರು ವಿಚಾರಣೆ ನಡೆಸುವಂತೆ ಒತ್ತಾಯಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್‌ಸ್ಟಾರ್‌ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಪಕ್ಷದ ರಾಜ್ಯ ಸಮಿತಿ ಸದಸ್ಯ ಜಿ.ಅಮರೇಶ, ತಾಲೂಕು ಕಾರ್ಯದರ್ಶಿ ಆರ್.ಹುಚ್ಚರೆಡ್ಡಿ, ಪದಾಕಾರಿಗಳಾದ ಅಜೀಜ್ ಜಾಗೀರದಾರ್, ಜಿ.ಅಡವಿರಾವ್, ಸೈಯದ್ ಅಬ್ಬಾಸ್ ಅಲಿ, ಅಡಿವೆಪ್ಪ, ಲಕ್ಷ್ಮಣ, ಅನ್ೀ, ನಿರಂಜನಕುಮಾರ ಇದ್ದರು. 
ಜಿಲ್ಲೆ

ಹೆಚ್ಚುವರಿ ಭೂಮಿ ಪ್ರಕರಣ ಮರು ವಿಚಾರಣೆ ನಡೆಸಿ

ರಾಚಯ್ಯ ಸ್ವಾಮಿ

ರಾಯಚೂರು: ಜವಳಗೇರಾ ಸೇರಿದಂತೆ ಜಿಲ್ಲೆಯ ಎಲ್ಲ ಹೆಚ್ಚುವರಿ ಭೂಮಿ ಪ್ರಕರಣಗಳ ಮರು ವಿಚಾರಣೆ ನಡೆಸುವಂತೆ ಒತ್ತಾಯಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್‌ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘಟನೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜವಳಗೇರಾದ ನಾಡಗೌಡರ ಹೆಚ್ಚುವರಿ ಭೂಮಿಯನ್ನು ಭೂ ರಹಿತ ಕೃಷಿ ಕಾರ್ಮಿಕರಿಗೆ ಸಾಗುವಳಿ ಮಾಡಲು ನೀಡಬೇಕು. ಸೆಕ್ಷನ್ 74ರ ಪ್ರಕಾರ ಬಾಕಿಯಿರುವ ಪ್ರಕರಣಗಳಿಗೆ ಸಂಬಂಸಿದಂತೆ ಭೂಮಿ ವರ್ಗಾವಣೆ ಮಾಡದಂತೆ ಎಲ್ಲ ಭೂ ಮಾಲೀಕರಿಗೆ ನೋಟಿಸ್ ನೀಡಬೇಕು.
ವಿಚಾರಣೆ ಹಂತದಲ್ಲಿರುವ ಜವಳಗೇರಾ ಸಿದ್ದಲಿಂಗಮ್ಮ ನಾಡಗೌಡರ ಪ್ರಕರಣದಲ್ಲಿ ತೋರಿಸಲಾದ 1,064 ಎಕರೆ ಭೂಮಿಯ ವರ್ಗಾವಣೆ, ಮಾರಾಟ ಮತ್ತು ವಹಿವಾಟಿನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿನ ಹೆಚ್ಚುವಿರಿ ಭೂಮಿಯನ್ನು ಲಾನುಭವಿಗಳಿಗೆ ನೀಡಬೇಕು.
ಜವಳಗೇರಾ ನಾಡಗೌಡ ಕುಟುಂಬದ 17 ಜನರ ಘೋಷಣಾ ಪತ್ರಗಳು ಸೇರಿದಂತೆ ಜಿಲ್ಲೆಯ ಎಲ್ಲ ಭೂಮಾಲೀಕರ ಹೆಚ್ಚುವರಿ ಪ್ರಕರಣಗಳು ಸೆಕ್ಷನ್ 122(3) ಅಡಿ ಮರು ವಿಚಾರಣೆ ಆರಂಭಿಸಬೇಕು. ಜಿಲ್ಲೆಯಾದ್ಯಂತ ಜಮಾಬಂ ಲೆಕ್ಕಪತ್ರ ಸರಿಪಡಿಸಬೇಕು.
ಭೂ ನ್ಯಾಯ ಮಂಡಳಿ ರಚನೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಕರ್ನಾಟಕ ಭೂ ಸುಧಾರಣೆ ಕಾಯ್ದೆ ಜಾರಿ ನಂತರ ಮಾಡಲಾದ ಎಲ್ಲ ತಿದ್ದುಪಡಿಗಳನ್ನು ರದ್ದುಪಡಿಸಬೇಕು. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲೆಮಾರಿ ಸಮುದಾಯಗಳ ಭೂರಹಿತರ ಸಮೀಕ್ಷೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಜಿ.ಅಮರೇಶ, ತಾಲೂಕು ಕಾರ್ಯದರ್ಶಿ ಆರ್.ಹುಚ್ಚರೆಡ್ಡಿ, ಪದಾಕಾರಿಗಳಾದ ಅಜೀಜ್ ಜಾಗೀರದಾರ್, ಜಿ.ಅಡವಿರಾವ್, ಸೈಯದ್ ಅಬ್ಬಾಸ್ ಅಲಿ, ಅಡಿವೆಪ್ಪ, ಲಕ್ಷ್ಮಣ, ಅನ್ೀ, ನಿರಂಜನಕುಮಾರ, ರಾಮು, ರಾಘವೇಂದ್ರ, ವಿಜಯ ಮನ್ಸೂರ್ ಪಾಲ್ಗೊಂಡಿದ್ದರು.