ಜಿಲ್ಲೆ

ಸ್ಥಗಿತಗೊಂಡಿದ್ದ ಸರ್ಕಾರಿ ಕಾಮಗಾರಿಗಳ ಮರು ಆರಂಭ; ಆದ್ರೆ ಷರತ್ತು ಅನ್ವಯ...

lakshmihegde

ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಲವು ಯೋಜನೆಗಳ ಪುನರಾರಂಭಕ್ಕೆ ಸರ್ಕಾರಿ ಸಂಸ್ಥೆಗಳು ಸಿದ್ಧತೆ ನಡೆಸಿವೆ. ಸರ್ಕಾರ ಏ. 20ರಿಂದ ಕೆಲವೊಂದು ಕ್ಷೇತ್ರಗಳಿಗೆ ವಿನಾಯಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಗಳಿಂದ ಅನುಷ್ಠಾನಗೊಂಡಿರುವ ಯೋಜನೆಗಳು ಆರಂಭವಾಗಲಿವೆ.

ಕರೊನಾ ಸೋಂಕು ಹರಡುವ ಭೀತಿಯಿಂದಾಗಿ ದೇಶದಾದ್ಯಂತ ಲಾಕ್​ಡೌನ್ ಮಾಡಲಾಗಿದೆ. ಇದರಿಂದ ಬಿಎಂಆರ್​ಸಿಎಲ್, ಬಿಐಎಎಲ್, ಬಿಬಿಎಂಪಿ, ಜಲಮಂಡಳಿ ಮತ್ತಿತರ ಸರ್ಕಾರಿ ಸಂಸ್ಥೆಗಳು ನಡೆಸುತ್ತಿದ್ದ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದೀಗ ಕೈಗಾರಿಕೆ, ಐಟಿ-ಬಿಟಿ ಕ್ಷೇತ್ರಗಳು ಷರತ್ತುಬದ್ಧವಾಗಿ ಕಾರ್ಯಚಟುವಟಿಕೆ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಅದರ ಜತೆಗೆ ಸರ್ಕಾರಿ ಸಂಸ್ಥೆಗಳು ಕೈಗೊಂಡಿರುವ ಕಾಮಗಾರಿಗಳ ಆರಂಭಕ್ಕೂ ಹಸಿರುನಿಶಾನೆ ಸಿಕ್ಕಿದೆ.

ಮೆಟ್ರೋ 2ನೇ ಹಂತ: ನಗರದಲ್ಲಿ 72 ಕಿ.ಮೀ. ಉದ್ದದ ಮೆಟ್ರೋ 2ನೇ ಹಂತದ ಕಾಮಗಾರಿ ಮಾ. 22ರಿಂದ ಸ್ಥಗಿತಗೊಂಡಿದೆ. ನಾಯಂಡಹಳ್ಳಿಯಿಂದ ಪಟ್ಟಣಗೆರೆ ಮಾರ್ಗ (ರೀಚ್ 2ಎ), ಪುಟ್ಟೇನಹಳ್ಳಿ ಕ್ರಾಸ್​ನಿಂದ ಅಂಜನಾಪುರ ಟೌನ್​ಶಿಪ್ (ರೀಚ್ 4ಬಿ) ಮತ್ತು ಪಟ್ಟಣಗೆರೆಯಿಂದ ಚಲ್ಲಘಟ್ಟವರೆಗಿನ (ರೀಚ್ 2ಬಿ) ಮಾರ್ಗಗಳ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಆರಂಭಿಸಲಾಗುತ್ತಿದ್ದು, ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸಾಮಾಜಿಕ ಅಂತರ ಕಡ್ಡಾಯ: ಕಾಮಗಾರಿ ವೇಳೆ ಕಾರ್ವಿುಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅದನ್ನು ನಿಗಾವಹಿಸುವುದು ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಹೊಣೆಯಾಗಿರಲಿದೆ. ಕಾಮಗಾರಿಗಳಿಗೆ ಅಗತ್ಯವಿರುವ ಅಗತ್ಯ ವಸ್ತುಗಳಾದ ಜಲ್ಲಿ, ಸಿಮೆಂಟ್ ಮತ್ತಿತರ ವಸ್ತುಗಳ ಪೂರೈಕೆಗೆ ಸಂಬಂಧಪಟ್ಟ ಉದ್ಯಮಿಗಳಿಗೆ ಸೂಚಿಸಲಾಗಿದೆ. ಗುತ್ತಿಗೆದಾರರಿಗೂ ಅವುಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಇಲಾಖೆಗಳು ಷರತ್ತು ವಿಧಿಸಿವೆ.

ಮೆಟ್ರೋಗೆ ಕಾರ್ವಿುಕರ ಸಮಸ್ಯೆ ಇಲ್ಲ

ಲಾಕ್​ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಲಕ್ಷಾಂತರ ಕಾರ್ವಿುಕರು ಬೆಂಗಳೂರು ತೊರೆದಿದ್ದಾರೆ. ಹೀಗಾಗಿ, ಬಿಬಿಎಂಪಿ ಕಾಮಗಾರಿಗಳಿಗೆ ಕಾರ್ವಿುಕರೇ ಸಿಗದ ಪರಿಸ್ಥಿತಿಯಿದೆ. ಆದರೆ, ಬಿಐಎಎಲ್ ಮತ್ತು ಬಿಎಂಆರ್ ಸಿಎಲ್ ಕಾಮಗಾರಿಗಳಿಗೆ ಅಗತ್ಯವಿರುವ ಕಾರ್ವಿುಕರು ಗುತ್ತಿಗೆದಾರರು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡು ವಂತೆ ಮಾಡಿರುವುದರಿಂದ ಸಮಸ್ಯೆ ಉಂಟಾಗುವು ದಿಲ್ಲ. ಆದರೆ, ಬಿಬಿಎಂಪಿ ಅನುಷ್ಠಾನಗೊಳಿಸಲಿರುವ ರಸ್ತೆ ಕಾಮಗಾರಿಗಳಿಗೆ ಕಾರ್ವಿುಕರನ್ನು ಹೊಂದಿಸಲು ಹರಸಾಹಸ ಪಡಬೇಕಾಗುತ್ತದೆ.

ಯೋಜನೆಗಳಿಗೆ ಮರುಚಾಲನೆ?

  • ಮೆಟ್ರೋ 2ನೇ ಹಂತದ ಕಾಮಗಾರಿ
  • ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ವಿುನಲ್ ನಿರ್ಮಾಣ
  • ಬಿಬಿಎಂಪಿ ಕೈಗೊಂಡಿರುವ ವೈಟ್​ಟಾಪಿಂಗ್, ಟೆಂಡರ್ ಶ್ಯೂರ್, ಸಿಗ್ನಲ್ ಫ್ರೀ ಕಾರಿಡಾರ್, ಸ್ಟೀಲ್ ಬ್ರಿಜ್ ಕಾಮಗಾರಿ ಸೇರಿ ಇನ್ನಿತರ ಯೋಜನೆಗಳು
  • 110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕೆಲಸ

| ಗಿರೀಶ್ ಗರಗ ಬೆಂಗಳೂರು