ಸಂಡೂರು ತಾಪಂ ಸಭಾಂಗಣದಲ್ಲಿ ಅರಣ್ಯ ಹಕ್ಕು ಮರು ಪರಿಶೀಲನಾ ಸಮಿತಿ ಸಭೆಯಲ್ಲಿ ತಾಪಂ ಇಒ ಮಡಗಿ ಬಸಪ್ಪ ಮಾತನಾಡಿದರು. ಬಳ್ಳಾರಿ ಜಿಲ್ಲಾ ಎಸ್‌ಟಿ ಕಲ್ಯಾಣಾಧಿಕಾರಿ ದಿವಾಕರ್, ತಾಪಂ ಎಡಿ ಮಹೇಶ್ ಕುಮಾರ್ ಇದ್ದರು. 
ಜಿಲ್ಲೆ

ಅರಣ್ಯ ಹಕ್ಕು ಅರ್ಜಿಗಳ ಮರು ಪರಿಶೀಲನೆ

ರುದ್ರಪ್ಪ ವಾಲಿ

ಸಂಡೂರು: ಪಟ್ಟಣದಲ್ಲಿ ಜಿಲ್ಲಾ ಎಸ್‌ಟಿ ಕಲ್ಯಾಣಾಧಿಕಾರಿ ದಿವಾಕರ್ ನೇತೃತ್ವದಲ್ಲಿ ತಾಲೂಕು ಅರಣ್ಯ ಹಕ್ಕು ಪರಿಶೀಲನಾ ಸಮಿತಿ ಸಭೆ ಬುಧವಾರ ನಡೆಯಿತು.

ಜಿಲ್ಲಾ ಎಸ್ಟಿ ಕಲ್ಯಾಣಾಧಿಕಾರಿ ದಿವಾಕರ್ ಮಾತನಾಡಿ, ಸುಪ್ರಿಂ ಕೋರ್ಟ್ ಅರಣ್ಯ ಹಕ್ಕು ಅರ್ಜಿಗಳನ್ನು ಮರು ಪರಿಶೀಲನೆ ಮಾಡಲು ನಿರ್ದೇಶನ ನೀಡಿದೆ.

ಆ ಹಿನ್ನೆಲೆಯಲ್ಲಿ ಪಿಡಿಒಗಳು, ಪುರಸಭೆ ಮುಖ್ಯಾಧಿಕಾರಿ ತಾಲೂಕಿನ ಗ್ರಾಮ ಅರಣ್ಯ ಹಕ್ಕು ಸಮಿತಿಯ ಫಲಾನುಭವಿಗಳ ಸಭೆ ಕರೆಯಬೇಕು. ಅವರಿಂದ ವಿವರ ಪಡೆದು ವರದಿಯನ್ನು ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಕಮಿಟಿಗೆ ಕಳುಹಿಸಿಕೊಡಬೇಕು. ಸಂಡೂರು ಪುರಸಭೆ ವ್ಯಾಪ್ತಿಯಲ್ಲಿ ವೆಂಕಟೇಶ್ವರ ದೇವಸ್ಥಾನ, ಲಕ್ಷ್ಮೀಪುರ ಸೇರಿದಂತೆ 365ಅರ್ಜಿಗಳು ಬಂದಿದ್ದು ಅವುಗಳ ಮರು ಪರಿಶೀಲನೆ ನಡೆಸಿ ಅದಷ್ಟು ಬೇಗನೆ ಕಳಿಸಿಕೊಡಬೇಕು ಎಂದರು.

ಜೆಜೆಎಂ ಅಧಿಕಾರಿ ಜಯಶ್ರೀ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಗ್ರಾಪಂಗಳಿಂದ ನಿರಂತರ ಕುಡಿಯುವ ನೀರೋದಗಿಸಬೇಕು. ತುಮಟಿ, ವಡೇರಹಳ್ಳಿ, ಬಿ.ಗೊಲ್ಲರಟ್ಟಿ, ಎಂ.ಲಕ್ಲಳ್ಳಿ, ಆಗ್ರಹಾರ, ಸುಶೀಲಾನಗರಗಳಲ್ಲಿ ಜನ ಪ್ರತಿನಿಧಿಗಳ ಸಭೆ ನಡೆಸಬೇಕು. ತಾಪಂ ಇಒ ಮಡಗಿನ ಬಸಪ್ಪ, ತಾಪಂ ಎಡಿಗಳಾದ ಮಹೇಶ ಕುಮಾರ್, ರೇಣುಕಾಚಾರ್ಯ ಸ್ವಾಮಿ, ಆರ್‌ಎಫ್‌ಒಗಳಾದ ಸೈಯದ್ ದಾದಾ ಖಲಂದರ್, ಬಿ.ಎಸ್.ಮಂಜುನಾಥ, ಮುಖ್ಯಾಧಿಕಾರಿ ಕೆ.ಜಯಣ್ಣ ಇತರರಿದ್ದರು.