ಆಲ್ದೂರು ಉಪ ತಹಸೀಲ್ದಾರ್ ಸುಮಿತ್ರಾಗೆ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಸದಸ್ಯರು ಮನವಿ ಸಲ್ಲಿಸಿದರು. 
ಜಿಲ್ಲೆ

ಹಳೇ ಕಾನೂನು ಮರುಜಾರಿಗೊಳಿಸಿ

ಎಸ್.ಎನ್.ರವೀಂದ್ರ

ಆಲ್ದೂರು: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಹಿಟ್ ಆ್ಯಂಡ್ ರನ್ ಕಾನೂನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್‌ನಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಆಟೋ ಚಾಲಕರು, ಮಾಲೀಕರು, ಗೂಡ್ಸ್ ವಾಹನ ಚಾಲಕರು, ಟ್ಯಾಕ್ಸಿ ವಾಹನ ಚಾಲಕ ಮತ್ತು ಮಾಲೀಕರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೂತನ ಕಾನೂನಿನ ಪ್ರಕಾರ ಅಪಘಾತ ಸಂಭವಿಸಿದಾಗ ವಾಹನ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂ. ದಂಡ ವಿಧಿಸಬಹುದು. ದಂಡ ಕಟ್ಟುವ ಶಕ್ತಿ ಚಾಲಕರಲ್ಲಿ ಇಲ್ಲ. ಆದ್ದರಿಂದ ಕಾನೂನನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಚಾಲಕರೆಲ್ಲರೂ ಒಟ್ಟಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಉಪ ತಹಸೀಲ್ದಾರ್ ಸುಮಿತ್ರಾ ಅವರಿಗೆ ಮನವಿ ಸಲ್ಲಿಸಿದರು. ಗ್ರಾಪಂ ಹಾಗೂ ಪೊಲೀಸ್ ಠಾಣೆಯಲ್ಲೂ ಮನವಿ ಸಲ್ಲಿಸಿದರು.