ಜಿಲ್ಲೆ

ವಿರಾಜಪೇಟೆ ಪಪಂನ 14 ಮಳಿಗೆಗಳ ಮರು ಹರಾಜು

ವಿರಾಜಪೇಟೆ: ಪಟ್ಟಣ ಪಂಚಾಯಿತಿಗೆ ಸೇರಿದ 14 ಮಳಿಗೆಗಳ ಹರಾಜಿನಿಂದ ಪಟ್ಟಣ ಪಂಚಾಯಿತಿಗೆ ವಾರ್ಷಿಕವಾಗಿ 16,36,200 ರೂ. ಆದಾಯ ಬಂದಿದೆ.

ಕಳೆದ 12ತಿಂಗಳ ಹಿಂದೆ ಈ ಮಳಿಗೆಗಳು ಹರಾಜಾಗಿದ್ದು ಕೆಲವರು ಬಿಡ್‌ನ ಹಣ ಪಾವತಿ ಮಾಡಿರಲಿಲ್ಲ. ಇನ್ನು ಕೆಲವರು ಮಳಿಗೆಗಳನ್ನು ಪಂಚಾಯಿತಿಗೆ ಹಿಂತಿರುಗಿಸಿದ್ದರಿಂದ 16ಮಳಿಗೆಗಳನ್ನು ಮರು ಹರಾಜು ಮಾಡಿದಾಗ 14 ಮಳಿಗೆಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಆದಾಯದ ನಿರೀಕ್ಷೆಯಂತೆ ಹರಾಜಾಗಿದೆ ಎನ್ನಲಾಗಿದೆ.

ಮಳಿಗೆಗಳ ಮರು ಹರಾಜು ಸಂದರ್ಭದಲ್ಲಿ ಆಡಳಿತಾಧಿಕಾರಿ ಮಹೇಶ್, ಮುಖ್ಯಾಧಿಕಾರಿ ಎಂ.ಎ.ಶ್ರ್ರೀಧರ್ ಸಹಾಯಕ ಅಭಿಯಂತರ ಎನ್.ಪಿ.ಹೇಮ್‌ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಿದ್ದರು.