ಗದಗ: "ಸ್ವರಾಜ್ಯ' ಎಂಬುದು ವೇದಗಳಿಂದ ಬಂದಂತ ಪದವಾಗಿದೆ. ಅದು ಕೇವಲ ರಾಜಕೀಯ ಪರಿಮಿತಿ ಹೊಂದಿರದೆ ಅದರ ವ್ಯಾಪ್ತಿ ಅಪರಿಮಿತ. ಸ್ವರಾಜ್ಯ ಪರಿಕಲ್ಪನೆಯು ಸ್ವನಿಯಂತ್ರಣ, ಸ್ವ ಆಡಳಿತ, ಸ್ವಾವಲಂಬಿ ಬದುಕು, ಭಾರತದ ಸಂಸತಿ, ಐಕ್ಯತೆ, ವಿವಿಧತೆ ಹೊಂದಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಹೇಳಿದರು. ನಗರದ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಬುಧವಾರದಿಂದ "ಸ್ವರಾಜ್ಯ ಸ್ವಯಂ ಆಡಳಿತದ ಮಾದರಿಗಳು' ಎಂಬ ವಿಷಯದ ಮೇಲೆ ಮೂರು ದಿನಗಳ ಕಾಲ ಆರಂಭಗೊಂಡ ಅಂತರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ವೇದದಿಂದ ಬಂದ ಸ್ವರಾಜ್ಯದ ಪರಿಕಲ್ಪನೆ ಎಂದರೆ ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ಇಲ್ಲಿ ನಾವು ಸೇರಿದ್ದೇವೆ. 1928 ರಲ್ಲಿ ಈ ದೇಶ ಸ್ವರಾಜ್ಯ ಆಗಬೇಕು ಎಂಬುದನ್ನು ಅಂದಿನ ಸ್ವಾತಂತ್ರ್ಯ ಹೋರಾಟಗಾರು ನಿರ್ಣಯಿಸಿದ್ದರು. ಸ್ವಾತಂತ್ರ್ಯ ನಂತರದಿಂದ ಸ್ವರಾಜ್ಯ ಸಾಧಿಸಲು ಪ್ರಯತ್ನಿಸುತ್ತಿದೆ. 2047 ರ ಒಳಗಾಗಿ ಭಾರತದಲ್ಲಿ ನಿಜವಾಗಲೂ ಸ್ವರಾಜ್ಯ ಸಕಾರಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮೀಸಬೇಕು ಎಂದು ಹೇಳಿದರು. ಮಹಾತ್ಮಾ ಗಾಂಧಿಜಿಯ ಸ್ವರಾಜ್ಯ ಪರಿಕಲ್ಪನೆ ಕುರಿತು ವಿವರಿಸಿ ಅವರು, ನಮ್ಮನ್ನು ನಾವು ಆಡಳಿತಕ್ಕೆ ಒಳಪಡಿಸಿಕೊಳ್ಳುವುದಷ್ಟೇ ಸ್ವರಾಜ್ಯವಲ್ಲ. ಜನರನ್ನು ಜಾಗೃತಗೊಳಿಸುವುದು, ಸಹಕಾರ, ಉತ್ತಮ ನಡತೆಗಳಿಂದ ಸ್ವರಾಜ್ಯ ರಾಷ್ಟ್ರ ಸೃಷ್ಟಿಸಬಹುದು. ವ್ಯವಸ್ಥೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯ ಬಹುಮುಖ್ಯ. ಆಡಳಿತ ವ್ಯವಸ್ಥೆಯಲ್ಲಿ ವ್ಯಕ್ತಿಗತ ಶಿಕ್ಷಣ, ಸ್ವಾವಲಂಬಿ, ಸ್ವತಂತ್ರ ಬದುಕು, ಸಾಮಾಜಿಕ ವ್ಯವಸ್ಥೆ, ವಿಭಿನ್ನ ಸಂಸತಿಗಳ ನಡುವೆ ಸಹಕಾರ ಅಗತ್ಯವಿದೆ. ಇದನ್ನೇ ಗಾಂಧಿಜಿ ಮತ್ತು ಸ್ವಾಮೀ ವಿವೇಕಾನಂದರು ತಿಳಿಸಿದ್ದರು. ಇವುಗಳಿಂದ ಗ್ರಾಮ ಸ್ವರಾಜ್ಯ ಸಾಧ್ಯ ಎಂದರು. ಪದ್ಮಶ್ರೀ ಮಂಜಮ್ಮ ಜೋಗತಿ ಮಾತನಾಡಿ, ಶಿಕ್ಷಣ ವ್ಯವಸ್ಥೆ ಮಾನವರನ್ನಾಗಿಸುತ್ತದೆ, ಆದರೆ ಮಾನವೀಯ ಮೌಲ್ಯಗಳನ್ನು ಬೆಳೆಸುವುದರಲ್ಲಿ ವಿಫಲವಾಗಿದೆ ನಮ್ಮತನವನ್ನು ಮೊದಲು ರಕ್ಷಣೆ ಮಾಡಿಕೊಳ್ಳುವ ಅಗತ್ಯವಿದೆ. ನಮ್ಮ ಪರಿಸರ, ನಮ್ಮ ಮನೆ ಗೌರವ, ಸಂಸ್ಕಾರಗಳು ಹಿಡಿತದಲ್ಲಿ ಇರಬೇಕು. ಅದುವೇ ಸ್ವರಾಜ್ಯ ಮೂಲ ಮಂತ್ರ ಎಂದು ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಹೇಳಿದರು. ಅಖಿಲ ಭಾರತ ಪ್ರಜ್ಞಾ ಪ್ರವಾಹ ಸಂಯೋಜಕ ನಂದಕುಮಾರ, ಲಲಿತ ಕಲಾ ಅಕಾಡಮಿ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ, ಕುಲಪತಿ ಡಾ. ವಿಷ್ಣುಕಾಂತ ಚಟಪಲ್ಲಿ, ಗಿರೀಶ ದೀಕ್ಷಿತ್, ಪ್ರೊ. ಬಸವರಾಜ ಇತರರು ಇದ್ದರು. ===== ಮಾತಾ ಮಂಜಮ್ಮ ನೋವು: ಕೊಲೆಗಾರ ಮಗನನ್ನು, ದುರ್ನಡತೆ ಮಗಳನ್ನು ಸ್ವೀಕರಿಸುವ ಪೋಷಕರು ತೃತೀಯ ಲಿಂಗಿಗಳನ್ನು ಮಕ್ಕಳೆಂದು ಸ್ವೀಕರಿಸುವುದಿಲ್ಲ ಎಂದು ಜೋಗತಿ ಮಂಜಮ್ಮ ವೇದಿಕೆಯಲ್ಲಿ ದುಃಖಿತರಾದರು. ಗರ್ಭದಲ್ಲಿ ತೃತೀಯ ಲಿಂಗಗಳು ಹುಟ್ಟಿದರೆ ಹೊರದೂಡತೆ ಅವರಿಗೂ ಶಿಕ್ಷಣ ಕೊಡಿಸಿ. ಭವಿಷ್ಯದಲ್ಲಿ ಸ್ವಾವಲಂಬಿಗಳಾಗಿ ಬದುಕುವಂತೆ ಜೀವನ ರೂಪಿಸಿ ಎಂದು ಪೋಷಕರಿಗೆ ಮನವಿ ಮಾಡಿದರು. ====
ಕೋಟ್: ಕೆಲ ಸಮ್ಮೇಳನಗಳು ಹೆಸರಿಗಷ್ಟೇ ಅಂತರಾಷ್ಟ್ರೀ ಸಮ್ಮೇಳನಗಳಾಗಿರುತ್ತವೆ. ಆದರೆ ಇಂದಿನ ಸಮ್ಮೇಳನದಲ್ಲಿ 14 ದೇಶಗಳಿಂದ ಡಿಲಿಗೇಟ್ಸ್ ಬಂದಿದ್ದಾರೆ. ಈ ಸಮ್ಮೇಳನ ಕೇವಲ ಸಂಶೋಧನೆ, ಪತ್ರಿಕೆಗಳ ಪ್ರಸ್ತುತ ಪಡಿಸುವುದಷ್ಟೇ ಅಲ್ಲ. ಸಮ್ಮೇಳನವು ಪ್ರಾಯೋಗಿಕ ಪರಿಕಲ್ಪನೆಯಲ್ಲಿ ಜರುಗಲಿದೆ. ಕಿನ್ನಾಳ ಆಟಿಕೆ, ನೀರು ನಿರ್ವಹಣೆ, ಕೃಷಿ, ಕೃಷಿ ಉಪಕರಣ, ಹನಿ ನೀರಾವರಿ, ನೀರು ಉಳಿತಾಯ ಕುರಿತು ವಸ್ತು ಪ್ರದರ್ಶನಗಳು ಮುಂದಿನ ಮೂರು ದಿನಗಳ ಕಾಲ ಜರುಗಲಿದೆ - ಡಾ. ವಿಷ್ಣುಕಾಂತ ಚಟಪಲ್ಲಿ, ಕುಲಪತಿ, ಆರ್ಡಿಪಿಆರ್ ವಿವಿ ಕೋಟ್: ಶಿಕ್ಷಣ ಕಲಿಸಿದರೆ ಮಾತ್ರ ವಿವಿಗಳ ಉದ್ದೇಶ ಸಾಕಾರಗೊಳ್ಳುವುದಿಲ್ಲ. ನಯ ವಿನಯತೆ, ಹಿರಿಯರಿಗೆ ಗೌರವ, ನಮ್ಮ ಸಂಸತಿ, ನಮ್ಮ ಉಡುಪು, ಆಹಾರ ಪದ್ಧತಿ, ಕೃಷಿ ಬಗ್ಗೆ ವಿವಿಗಳಲ್ಲಿ ಶೈಕ್ಷಣಿಕ ದಾರೆ ಎರೆಯಬೇಕು - ಮಾತಾ ಮಂಜಮ್ಮ ಜೋಗತಿ, ಪದ್ಮಶ್ರೀ ಪುರಸತ