ಜಿಲ್ಲೆ

ಗ್ರಾಮೀಣಾಭಿವೃದ್ಧಿ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರ ಭಾಷಣ. ಶ್ರೇಷ್ಠ ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಕರೆ.

Gadag - Shivanand Hiremath

ಗದಗ: ಗ್ರಾಮೀಣ ಅಭಿವೃದ್ಧಿಯ ಕಲ್ಪನೆಯೊಂದಿಗೆ ಸ್ಥಾಪಿತಗೊಂಡ ಗ್ರಾಮೀಣ ವಿಶ್ವವಿದ್ಯಾಲಯದ ಕನಸು ನನಸಾಗುವತ್ತ ಸಾಗುತ್ತಿದೆ. ಇಲ್ಲಿನ ವಿದ್ಯಾಥಿರ್ಗಳು ನೂತನ ಭಾರತ, ಶ್ರೇಷ್ಠ ಭಾರತ, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಂಕಲ್ಪ ತೋಡಬೇಕು ಎಂದು ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಕರೆ ನೀಡಿದರು.
ಗದಗಿನ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಶುಕ್ರವಾರ ಜರುಗಿದ 3ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್​ ಪ್ರಧಾನ ಮತ್ತು ವಿದ್ಯಾಥಿರ್ಗಳಿಗೆ ಚಿನ್ನದ ಪದಕ ವಿತರಿಸಿ ಮಾತನಾಡಿದ ಅವರು, ಕೃಷಿ ಜತೆ ಕೃಷಿಯಲ್ಲಿ ಐಟಿ ಕ್ರಾಂತಿ ತರುವುದು ಅಗತ್ಯವಿದೆ. ಮಾಲಿನ್ಯ ಎಂಬುದು ವಿಶ್ವದ ಸಮಸ್ಯೆಯಾಗಿದ್ದು, ಮಾಲಿನ್ಯ ನಿಯಂತ್ರಣ ಮತ್ತು ಉತ್ತಮ ಪರಿಸರ ಬೆಳವಣಿಗೆಗೆ ಕಾರ್ಯಕ್ರಮ ರೂಪಿಸಬೇಕು. ವಿದ್ಯಾಥಿರ್ಗಳು ಸಹಕರಿಸಬೇಕು. ಈ ಹಿನ್ನೆಲೆ ಸಾರ್ವಜನಿಕರು ಭಾರತದ ಅಭಿವೃದ್ಧಿಗೆ ಯೋಗದಾನ ಮಾಡಬೇಕಿದೆ. ರೈತರ ಅಭಿವೃದ್ಧಿಗೆ ಕೃಷಿಯಲ್ಲಿ ಪರಿಣಾಮಕಾರಿ ಬದಲಾವಣೆ ಅವಶ್ಯವಿದೆ. ವಿವಿ ವಿದ್ಯಾಥಿರ್ಗಳ ವಿನೂತನ ಕಲ್ಪನೆ, ವಿಚಾರ, ಅವಿಷ್ಕಾರದಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯವಿದೆ ಎಂದರು.
ವಿವಿ ಕುಲಪತಿ ಡಾ. ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ವಿದ್ಯಾಥಿರ್ಗಳಿಗೆ ತಂದೆ ತಾಯಿಗಳ ಕಷ್ಟ ತಿಳಿದಿರುವುದಿಲ್ಲ. ಪೋಷಕರ ಕನಸುಗಳನ್ನು ನನಸು ಮಾಡಲು ನೀವು ಸನ್ನದ್ಧರಾಗಿದ್ದಿರಿ. ಭವಿಷ್ಯದಲ್ಲಿ ವಿಶ್ವವಿದ್ಯಾಲಯದ ಅಂಬಾಸಿಡರ್​ ಗಳಂತೆ ಕಾರ್ಯ ನಿರ್ವಹಿಸಿ ವಿವಿ ಹೆಸರನ್ನು ಪ್ರಜ್ವಲಗೊಳಿಸಬೇಕು ಎಂದ ಅವರು, ಸ್ವರಾಜ್​ ಕಲ್ಪನೆ, ಸ್ವಗ್ರಾಮ ಫೆಲೋಶಿಪ್​, ಅಂತರಾಷ್ಟ್ರೀಯ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಯದಲ್ಲೇ ಗೋಶಾಲೆ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಗ್ರಾಮೀಣಾಭಿವೃದ್ಧಿ ಸಂಕಲ್ಪ ಎಂಬ ಘೋಷವಾಕ್ಯವನ್ನು ಸಾಕಾರಗೊಳಿಸುವಂತೆ ಕೆಲಸ ಮಾಡುತ್ತಿದ್ದೆವೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ "ಗ್ರಾಮೀಣಾಭಿವೃದ್ಧಿ ಚೇತನ' ಬಿರುದು ನೀಡಿ ಶಿವಾಜಿ ಕಾಗಣಿಕರ ಅವರಿಗೆ ಡಾಕ್ಟರೇಟ್​ ಪದವಿ ನೀಡಿ ಗೌರವಿಸಲಾಯಿತು. ವಿವಿಧ ಸ್ನಾತಕೋತ್ತರ ವಿಭಾಗದ 182 ಹಾಗೂ ಡಿಪ್ಲೊಮಾ ವಿಭಾಗದ 10 ವಿದ್ಯಾಥಿರ್ಗಳಿಗೆ ಶೈಕ್ಷಣಿಕ ಪದವಿ ಪ್ರದಾನ ಮತ್ತು ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ 10 ಸಾಧಕರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಕೇಂದ್ರಿಯ ವಿವಿ ಕುಲಾಧಿಪತಿ ಡಾ. ಸುಬ್ಬಣ್ಣ ಅಯ್ಯಪ್ಪನ್​, ಕುಲಸಚಿವ ಬಸವರಾಜ ಲಕ್ಕಣ್ಣವರ, ಜಿಪಂ ಸಿಇಒ ಡಾ. ಸುಶೀಲಾ ಬಿ, ಮಾರುತಿ ಎಂ.ಪಿ. ಇತರರು ಇದ್ದರು.

ಉಪನಿಷತ್ತು ಉಲ್ಲೇಖ:ಉಪನಿಷತ್ತುಗಳಲ್ಲಿ ಉಲ್ಲೇಖ ಇರುವ ವಾಕ್ಯಗಳಗಳನ್ನು ವಿದ್ಯಾಥಿರ್ಗಳಿಗೆ ಬೋಧಿಸಿದ ಡಾ. ವಿಷ್ಣುಕಾಂತ ಚಟಪಲ್ಲಿ, ಸತ್ತವನ್ನೇ ಹೇಳುವುದು, ಶಿಕ್ಷಣವನ್ನು ಪ್ರಮಾಣಿಕತೆ ಬಳಸುವುದು, ತಂದೆ, ತಾಯಿ, ಅತಿಥಿಗಳನ್ನು ದೇವರಂತೆ ಕಾಣಬೇಕು. ವಿದ್ಯೆಯ ಜತೆ ವಿನಯತೆ ಗುಣಗಳನ್ನು ರೂಢಿಸಿಕೊಳ್ಳಲು ವಿದ್ಯಾಥಿರ್ಗಳಿಗೆ ತಿಳಿಸಿದರು.
ಮಾತೃಭಾಷೆಗೆ ಮಹತ್ವ ನೀಡಿ:ವಿಶ್ವದಲ್ಲಿ ಕೆಲವೇ ದೇಶಗಳು ಮಾತೃ ಭಾಷೆಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಅದರಲ್ಲಿ ಯಶಸ್ವಿಯೂ ಅಗಿವೆ. ವಿಶ್ವದ ಜತೆ ಮಾತೃಭಾಷೆಯೊಂದಿಗೆ ವ್ಯವಹರಿಸಿ ಬಲಿಷ್ಠವಾಗುತ್ತಿವೆ. ನಮ್ಮ ದೇಶವು ಮಾತೃಭಾಷೆಯಲ್ಲಿ ಕಾರ್ಯ ನಿರ್ವಹಿಸಬೇಕು. ಮಾತೃ ಭಾಷೆಗೆ ಮನ್ನಣೆ ನೀಡಬೇಕು. ಮುಂದಿನ 25 ವರ್ಷಗಳ ಕಾಲ ಭಾರತಕ್ಕೆ ಅಮೃತ ಕಾಲವಿದ್ದು, ಅದನ್ನು ಕಾಯಕ ಕಾಲ ಎಂದು ಬಳಸಿಕೊಂಡರೆ ಅದ್ಭುತ ಸೃಷ್ಟಿಯಾಗಲಿದೆ ಎಂದು ರಾಜ್ಯ ಥಾವರಚಂದ್​ ಗೆಹಲೋತ್​ ತಿಳಿಸಿದರು.
ಕೋಟ್​:ಆಹಾರ ಸಂಸ್ಕರಣೆ ಅಭಿವೃದ್ಧಿ ಮತ್ತು ಮಾರುಕಟ್ಟೆಯಲ್ಲಿ ಅದಕ್ಕಿರುವ ಮಹತ್ವ ಕುರಿತು ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ. ಇಂದು ಆಹಾರ ಸಂಸ್ಕರಣೆ ಕೃಷಿ ಉದ್ಯಮವಾಗಿ ಬೆಳೆದಿದ್ದು, ಈ ಕೋರ್ಸ್​ ಉದ್ಯಮಕ್ಕೆ ಪೂರಕವಾಗಿದೆ.- ಕೆ.ಆರ್​. ಮೋಹನ್​, ಚಿನ್ನದ ಪದಕ ವಿಜೇತ, ಎಂಎಸ್ಸಿ( ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ)
ಕೋಟ್​:ಗ್ರಾಮೀಣ ಭಾಗದಲ್ಲಿ ಸಹಕಾರ ಕ್ಷೇತ್ರ ಬಲವಾಗಿದೆ. ಸಹಕಾರ ನಿರ್ವಹಣೆ, ಕಾನೂನು ಮತ್ತು ಅದರ ಬಲವರ್ಧನೆಯಲ್ಲಿ ಸಾಕಷ್ಟು ಅವಕಾಶಗಳು ಇವೆ.-ಪೂಜಾ ಕಣವಿ, ಚಿನ್ನದ ಪದಕ ವಿಜೇತೆ, ಎಂ.ಕಾಂ (ಸಹಕಾರ ನಿರ್ವಹಣೆ)